ರಷ್ಯಾದ 2 ನೇ ಹಂತದ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್‌ಗೆ ಆಗಮನ

Prasthutha|

ಹೈದರಾಬಾದ್ ; 2ನೇ ಹಂತದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯು ಭಾರತಕ್ಕೆ ಆಗಮಿಸಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಅತ್ಯಂತ ಪರಿಣಾಮಕಾಗಿಯಾಗಿದೆ ಎಂದು ರಷ್ಯಾದ ತಜ್ಞರು ಘೋಷಣೆ ಮಾಡಿದ್ದಾರೆ.

ಭಾನುವಾರ ಹೈದರಾಬಾದ್‌ಗೆ ಸ್ಪುಟ್ನಿಕ್ ವಿ ಲಸಿಕೆಯ ಆಗಮಿಸಿದೆ. ಭಾರತದಲ್ಲಿನ ರಷ್ಯಾ ರಾಯಭಾರಿ ಎನ್. ಕುಡಶೇವ್ ಲಸಿಕೆ ಆಗಮನದ ಕುರಿತು ಮಾತನಾಡಿದ್ದಾರೆ.

- Advertisement -

ಸ್ಪುಟ್ನಿಕ್ ವಿ ಲಸಿಕೆ ಪರಿಣಾಮದ ಬಗ್ಗೆ ಜಗತ್ತಿಗೆ ತಿಳಿದಿದೆ. 2020ರ ದ್ವಿತಿಯಾರ್ಧದಲ್ಲಿಯೇ ರಷ್ಯಾದಲ್ಲಿ ಇದರ ಬಳಕೆಯನ್ನು ಆರಂಭಿಸಲಾಗಿದೆ. ಜನರ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಇದು ಬೀರಿದೆ” ಎಂದು ಎನ್. ಕುಡಶೇವ್ ಹೇಳಿದ್ದಾರೆ.

ಹೈದರಾಬಾದ್‌ನ ರೆಡ್ಡೀಸ್ ಸಂಸ್ಥೆ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ವಿತರಣೆ ಮಾಡುತ್ತದೆ. ಈಗಾಗಲೇ ಹೈದರಾಬಾದ್‌ನಲ್ಲಿ ಇದನ್ನು ಜನರಿಗೆ ನೀಡಲಾಗುತ್ತಿದೆ. ಇದರ ತಯಾರಿ ಸಹ ಭಾರತದಲ್ಲಿ ನಡೆಯಲಿದೆ.

“ಸ್ಪುಟ್ನಿಕ್ ವಿ ರಷ್ಯಾ-ಭಾರತದ ಲಸಿಕೆಯಾಗಿದೆ. ಇದರ ಉತ್ಪಾದನೆಯನ್ನು ಪ್ರತಿವರ್ಷಕ್ಕೆ 850 ಮಿಲಿಯನ್ ಡೋಸ್‌ಗೆ ಹೆಚ್ಚಿಸಲಾಗುತ್ತದೆ. ಭಾರತದಲ್ಲಿ ಲಸಿಕೆಯ ಒಂದು ಡೋಸ್ ಮಾತ್ರ ಪರಿಚಯಿಸುವ ಉದ್ದೇಶವಿದೆ” ಎಂದು ಎನ್. ಕುಡಶೇವ್ ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್ ವಿರುದ್ಧ ಹೋರಾಟದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡಲಾಗುತ್ತಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡು ಡೋಸ್ ಪಡೆಯಬೇಕಾಗಿದೆ.

- Advertisement -