ತಿರುವನಂತಪುರಂ: ರಷ್ಯಾ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಭಾರತದ ಕೇರಳದಲ್ಲಿ ನೆಲೆಸಿರುವ ಸುಮಾರು 60 ರಷ್ಯನ್ನರು ತಮ್ಮ ಮತವನ್ನು ಚಲಾಯಿಸಿದ್ದಾರೆ.
ರಶ್ಯದಲ್ಲಿ ಅಧ್ಯಕ್ಷೀಯ ಚುನಾವಣೆ ಮಾರ್ಚ್ 15ರಂದು ಆರಂಭಗೊಂಡಿದ್ದು ಮಾರ್ಚ್ 17ರವರೆಗೆ ನಡೆಯಲಿದ್ದು ದೇಶದಾದ್ಯಂತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮಧ್ಯೆ ಭಾರತದ ಕೇರಳದಲ್ಲಿ ನೆಲೆಸಿರುವ ರಶ್ಯನ್ ಪ್ರಜೆಗಳಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ರಷ್ಯಾದ ಗೌರವಾನ್ವಿತ ಕಾನ್ಸುಲ್ ಮತ್ತು ತಿರುವನಂತಪುರಂನಲ್ಲಿರುವ ರಷ್ಯನ್ ಹೌಸ್ನ ನಿರ್ದೇಶಕ ರತೀಶ್ ನಾಯರ್ ಅವರು ಮೂರನೇ ಬಾರಿಗೆ ರಷ್ಯಾದ ಅಧ್ಯಕ್ಷೀಯ ಚುನಾವಣೆಗೆ ಮತದಾನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಸಹಕರಿಸಿದ ಕೇರಳದಲ್ಲಿರುವ ರಷ್ಯಾದ ನಾಗರಿಕರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ರತೀಶ್ ನಾಯರ್, ರಷ್ಯಾ ಒಕ್ಕೂಟದ ಕೇಂದ್ರ ಚುನಾವಣಾ ಆಯೋಗವು ಕೇರಳದಲ್ಲಿರುವ ರಷ್ಯಾದ ನಾಗರಿಕರು ತಮ್ಮ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮತ ಚಲಾಯಿಸಿದ್ದಾರೆ. ಮತದಾನದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.