Home ಟಾಪ್ ಸುದ್ದಿಗಳು ರಷ್ಯಾ- ಉಕ್ರೇನ್ ಯುದ್ಧ: ಪ್ರಾಣ ಕಳೆದುಕೊಂಡ ಪುಟ್ಟ ಕಂದಮ್ಮಗಳು

ರಷ್ಯಾ- ಉಕ್ರೇನ್ ಯುದ್ಧ: ಪ್ರಾಣ ಕಳೆದುಕೊಂಡ ಪುಟ್ಟ ಕಂದಮ್ಮಗಳು

Women look after their babies at the pediatrics center after the unit was moved to the basement of the hospital which is being used as a bomb shelter, in Kyiv on February 28, 2022. - The Russian army said on February 28, 2022, that Ukrainian civilians could "freely" leave the country's capital Kyiv and claimed its airforce dominated Ukraine's skies as its invasion entered a fifth day. (Photo by Aris Messinis / AFP) (Photo by ARIS MESSINIS/AFP via Getty Images)

ಕೀವ್: ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಹಲವು ಸಾವು ನೋವುಗಳು ಸಂಭವಿಸಿದ್ದು, ಉಕ್ರೇನ್‌ ನ ಸುಮಾರು 38 ರಷ್ಟು ಪುಟ್ಟ ಕಂದಮ್ಮಗಳು ಪ್ರಾಣ ಕಳೆದುಕೊಂಡಿವೆ.

ಈ ಬಗ್ಗೆ ಮಾತನಾಡಿದ ಉಕ್ರೇನ್‌ ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ಅವರ ಪತ್ನಿ ಒಲೆನಾ ಝೆಲೆನ್‌ಸ್ಕಿ “ದಯವಿಟ್ಟು, ಉಕ್ರೇನ್‌ನಲ್ಲಿ ಹಾರಾಟ ನಿಷೇಧ ವಲಯವನ್ನು ಘೋಷಿಸಿ. ನಮ್ಮ ಮಕ್ಕಳನ್ನು ಉಳಿಸಿ. ಇಂದು ನೀವು ನಮ್ಮ ಮಕ್ಕಳ ಜೀವ ಕಾಪಾಡಿದರೆ, ನಾಳೆ ನಿಮ್ಮ ಮಕ್ಕಳೂ ಉಳಿಯುತ್ತಾರೆ ಎಂದು ನ್ಯಾಟೋ ಪಡೆಗಳಿಗೆ ಮನವಿ ಮಾಡಿದ್ದಾರೆ.

ಸೋಮವಾರ ವಿಡಿಯೋ ಮೂಲಕ ಮಾತನಾಡಿರುವ ಒಲೆನಾ, “ಪುತಿನ್‌ ಪಡೆಗಳ ಉಕ್ರೇನ್‌ ಮೇಲಿನ ಆಕ್ರಮಣದಿಂದಾಗಿ ನಮ್ಮ ಮಕ್ಕಳನ್ನು ನಿರಂತರವಾಗಿ ಜೀವ ಕಳೆದುಕೊಳ್ಳುತ್ತಿವೆ. ಫೈರಿಂಗ್‌ ನಿಲ್ಲಿಸಲು ಇನ್ನೆಷ್ಟು ಮಕ್ಕಳು ಬಲಿಯಾಗಬೇಕು’ ಎಂದು ಪ್ರಶ್ನಿಸಿರುವ ಒಲೆನಾ, “ಪುತಿನ್‌ನ ಸೇನೆಯು ಕಂದಮ್ಮಗಳನ್ನು ಮಾರಣಹೋಮ ಮಾಡುತ್ತಿರುವ ಘೋರ ಸತ್ಯವನ್ನು ಜಗತ್ತಿಗೆ ತೋರಿಸಿ’ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

Join Whatsapp
Exit mobile version