ಮಾಸ್ಕೋ: ಶೀಘ್ರದಲ್ಲೇ ಉಕ್ರೇನ್ ಜತೆಗಿನ ಸಂಘರ್ಷವನ್ನು ಅಂತ್ಯಗೊಳಿಸಲು ರಷ್ಯಾ ಬಯಸುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪುಟಿನ್, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಅತ್ಯಂತ ಬೇಗನೇ ಅಂತ್ಯಗೊಳಿಸಲು ಬಯಸಿದ್ದು, ಇದಕ್ಕಾಗಿ ಶ್ರಮ ಪಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
‘ಈ ಸಂಘರ್ಷವನ್ನು ಅಂತ್ಯಗೊಳಿಸುವುದು ನಮ್ಮ ಧ್ಯೇಯ. ಇದು ರಾಜತಾಂತ್ರಿಕವಾಗಿರಲಿದ್ದು, ಎಲ್ಲವೂ ಶೀಘ್ರವೇ, ಉತ್ತಮ ರೀತಿಯಲ್ಲಿ ಅಂತ್ಯವಾಗಲಿದೆ‘ ಎಂದು ಪುಟಿನ್ ಹೇಳಿದ್ದಾರೆ.