Home ಟಾಪ್ ಸುದ್ದಿಗಳು ಕದನ ವಿರಾಮ ಘೋಷಿಸಿದ ರಷ್ಯಾ: ಉಕ್ರೇನ್ ನಿಂದ ನಾಗರಿಕರ ತೆರವಿಗೆ ಮಾನವೀಯ ದೃಷ್ಟಿಯಲ್ಲಿ ಈ ನಿರ್ಧಾರ...

ಕದನ ವಿರಾಮ ಘೋಷಿಸಿದ ರಷ್ಯಾ: ಉಕ್ರೇನ್ ನಿಂದ ನಾಗರಿಕರ ತೆರವಿಗೆ ಮಾನವೀಯ ದೃಷ್ಟಿಯಲ್ಲಿ ಈ ನಿರ್ಧಾರ ಎಂದ ಪುಟಿನ್

ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ಭಾಗಶಃ ಕೈವಶಪಡಿಸಿಕೊಂಡಿರುವ ರಷ್ಯಾ ಶನಿವಾರ ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿದೆ.

ಯುದ್ಧ ಘೋಷಣೆ ಮಾಡಿ 11 ದಿನಗಳ ಬಳಿಕ ರಷ್ಯಾ ಈ ನಿರ್ಧಾರವನ್ನು ಇಂದು ಬೆಳಗ್ಗೆ 6 ಗಂಟೆಗೆ ಘೋಷಿಸಿದೆ.

ನಾಗರಿಕರನ್ನು ತೆರವುಗೊಳಿಸಲು ಅನುಕೂಲವಾಗುವಂತೆ ಮಾನವೀಯ ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ರಷ್ಯಾ ತಿಳಿಸಿದೆ. ಉಭಯ ದೇಶಗಳ ನಡುವೆ 2 ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಎಷ್ಟು ಗಂಟೆಗಳ ಕಾಲ ಕದನ ವಿರಾಮ ಜಾರಿಯಲ್ಲಿ ಇರಲಿದೆ ಎಂಬುದನ್ನು ರಷ್ಯಾ ಅಧ್ಯಕ್ಷ ಪುಟಿನ್ ಸ್ಪಷ್ಟಪಡಿಸಿಲ್ಲ. ಇದರಿಂದಾಗಿ ಉಕ್ರೇನ್  ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರಿಗೆ ಸುರಕ್ಷಿತ ತೆರವಿಗೆ ಸಹಾಯವಾಗಲಿದೆ.

Join Whatsapp
Exit mobile version