ಕೀವ್: ರಷ್ಯಾ – ಉಕ್ರೇನ್ ಕದನ ಮುಂದುವರಿದಿದ್ದು, ರಷ್ಯಾವು ಪರಮಾಣು ಭಯೋತ್ಪಾದನೆಯನ್ನು ಆಶ್ರಯಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಉಕ್ರೇನ್ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಫೋಟಿಸಿದ ಬಳಿಕ ಝೆಲೆನ್ಸ್ಕಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಈ ಕುರಿತ ಅಧ್ಯಕ್ಷ ಝೆಲೆನ್ಸ್ಕಿ ಅವರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಉಕ್ರೇನ್’ನ ಜಪೊರಿಝಿಯಾ ಪರಮಾಣು ಸ್ಥಾವರದ ಮೇಲೆ ರಷ್ಯಾದ ದಾಳಿಯನ್ನು ‘ಪರಮಾಣು ಭಯೋತ್ಪಾದನೆ’ ಎಂದು ಅವರು ಜರಿದಿದ್ದಾರೆ.
ಈ ಮಧ್ಯೆ ರಷ್ಯಾದ ವಿರುದ್ಧ ಜಾಗತಿಕ ನಾಯಕರು ಎಚ್ಚರಿಕೆ ವಹಿಸುವಂತೆ ಮತ್ತು ತಕ್ಷಣ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.