Home ಟಾಪ್ ಸುದ್ದಿಗಳು ಮೆಲಿಟೊಪೋಲ್ ಮೇಯರ್’ರನ್ನು ರಷ್ಯಾ ಅಪಹರಿಸಿದೆ – ಅಧ್ಯಕ್ಷ ಝೆಲೆನ್ಸ್ಕಿ ಆರೋಪ

ಮೆಲಿಟೊಪೋಲ್ ಮೇಯರ್’ರನ್ನು ರಷ್ಯಾ ಅಪಹರಿಸಿದೆ – ಅಧ್ಯಕ್ಷ ಝೆಲೆನ್ಸ್ಕಿ ಆರೋಪ

ಕೀವ್:  ರಷ್ಯಾ ಪಡೆಗಳು ಮೆಲಿಟೊಪೋಲ್ ನಗರದ ಮೇಯರ್ ಅವರನ್ನು ಶುಕ್ರವಾರ ಅಪಹರಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.

ಉಕ್ರೇನ್ ನ ಅಧ್ಯಕ್ಷೀಯ ಕಚೇರಿಯ ಉಪ ಮುಖ್ಯಸ್ಥರಾದ ಕಿರಿಲ್ ಟಿಮೊಶೆಂಕೊ ಅವರು ಸಾಮಾಜಿಕ ಜಾಲತಾಲ ಟೆಲಿಗ್ರಾಮ್ ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಮೇಯರ್ ಇವಾನ್ ಫೆಡೋರೊವ್ ಅವರನ್ನು ಹೊತ್ತೊಯ್ಯುತ್ತಿರುವುದನ್ನು ತೋರಿಸಿದೆ.

ರಷ್ಯಾ ಭಯೋತ್ಪಾದನೆ ಹೊಸ ಹಂತಕ್ಕೆ ಪರಿವರ್ತನೆಗೊಂಡಿದ್ದು ಇದರಲ್ಲಿ ಅವರು ಉಕ್ರೇನ್ ನ ಕಾನೂನುಬದ್ಧ ಸ್ಥಳೀಯ ಜನ ಪ್ರತಿನಿಧಿಗಳನ್ನು ಅಪಹರಿಸಿ ಏಕಾಂಗಿ ಮಾಡಲು ಪ್ರಯತ್ನಿಸುತ್ತಾರೆ” ಎಂದು ಝೆಲೆನ್ಸ್ಕಿ ಶುಕ್ರವಾರ ಸಂಜೆ ವೀಡಿಯೊ ಭಾಷಣದಲ್ಲಿ ಹೇಳಿದ್ದಾರೆ.

150,000 ಜನಸಂಖ್ಯೆ ಇರುವ ದಕ್ಷಿಣ ಬಂದರು ನಗರವಾದ ಮೆಲಿಟೊಪೋಲ್ ಅನ್ನು ಫೆಬ್ರವರಿ 26 ರಂದು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ.

Join Whatsapp
Exit mobile version