Home ಟಾಪ್ ಸುದ್ದಿಗಳು ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧಿಸಿದ ರಷ್ಯಾ

ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧಿಸಿದ ರಷ್ಯಾ

ಮಾಸ್ಕೋ: ರಷ್ಯಾದ ಡಿಜಿಟಲ್ ಅಭಿವೃದ್ಧಿ ಸಚಿವಾಲಯವು ಸರ್ಕಾರಿ ಉದ್ಯೋಗಿಗಳು ಕೆಲಸದ ಉದ್ದೇಶಗಳಿಗೆ ಆಪಲ್ ಐಫೋನ್ ಅಥವಾ ಐಪ್ಯಾಡ್ ಬಳಸುವುದನ್ನ ನಿಷೇಧಿಸಿದೆ ಎಂದು ಸಚಿವ ಮಕ್ಸುತ್ ಶಾದೇವ್ ಹೇಳಿದ್ದಾರೆ.

ಸರ್ಕಾರಿ ಕೆಲಸದ ಅಪ್ಲಿಕೇಷನ್‌ಗಳನ್ನ ಬಳಸಲು, ಇಮೇಲ್ ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಐಫೋನ್ ಮತ್ತು ಐಪ್ಯಾಡ್ ಬಳಸದಂತೆ ಎಚ್ಚರಿಸಿದೆ. ಅಮೆರಿಕದ ಬೇಹುಗಾರಿಕೆ ಕಾರ್ಯಾಚರಣೆಯ ಪರಿಣಾಮವಾಗಿ ಆಪಲ್ ರಾಜಿ ಮಾಡಿಕೊಂಡಿದೆ ಎಂದು ರಷ್ಯಾದ ಭದ್ರತಾ ಸಂಸ್ಥೆ FSB ಹೇಳಿದ ಎರಡು ತಿಂಗಳ ನಂತರ ಈ ಬೆಳವಣಿಗೆ ಕಂಡುಬಂದಿದೆ. ಆದ್ರೆ ರಷ್ಯಾ ಭದ್ರತಾ ಸಂಸ್ಥೆಯ ಆರೋಪವನ್ನ ಅಮೆರಿಕ ತಳ್ಳಿಹಾಕಿದೆ.

ಬೇಕಿದ್ದರೆ ವೈಯಕ್ತಿಕ ಅಗತ್ಯಗಳಿಗಾಗಿ ಐಫೋನ್ ಬಳಸಬಹುದು. ಆದ್ರೆ ಯಾವುದೇ ಕಾರಣಕ್ಕೂ ಸರ್ಕಾರಿ ಕೆಲಸಗಳಿಗೆ ಐಫೋನ್ ಬಳಸುವಂತಿಲ್ಲ ಎಂದು ಆದೇಶಿಸಿರುವುದಾಗಿ ಶಾವೇದ್ ತಿಳಿಸಿದ್ದಾರೆ.

ಈ ಹಿಂದೆ ಅಮೆರಿಕ ಬೇಹುಗಾರಿಕೆ ನಡೆಸುತ್ತಿದೆ, ಐಫೋನ್ ಮೂಲಕ ಕದ್ದಾಲಿಕೆ ಮಾಡುತ್ತಿದೆ ಎಂಬ ಸಂಶಯದ ಮೇಲೆ ಸರ್ಕಾರಿ ಉದ್ಯೋಗಿಗಳು ಐಫೋನ್ ಬಳಸದಂತೆ ಸಂಪೂರ್ಣ ನಿಷೇಧಿಸಿತ್ತು. ಇದೀಗ ವೈಯಕ್ತಿಕ ಬಳಕೆಗೆ ಅನುಮತಿ ನೀಡಿದೆ.

Join Whatsapp
Exit mobile version