Home ಟಾಪ್ ಸುದ್ದಿಗಳು ಸಲ್ಮಾನ್ ರಶ್ದಿ ಬದುಕಿದ್ದಾರೆ. ಆದರೆ ಕೈ, ಕಣ್ಣಿನ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ: ವರದಿ ಪ್ರಕಟ

ಸಲ್ಮಾನ್ ರಶ್ದಿ ಬದುಕಿದ್ದಾರೆ. ಆದರೆ ಕೈ, ಕಣ್ಣಿನ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ: ವರದಿ ಪ್ರಕಟ

ನ್ಯೂಯಾರ್ಕ್: ಪಶ್ಚಿಮ ನ್ಯೂಯಾರ್ಕ್ ನಲ್ಲಿ ಆಗಸ್ಟ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಗೆ ನುಗ್ಗಿದ ವ್ಯಕ್ತಿಯ ದಾಳಿಯಿಂದ ಆಸ್ಪತ್ರೆಗೆ ದಾಖಲಾಗಿರುವ ಸಲ್ಮಾನ್ ರಶ್ದಿ, ಒಂದು ಕಣ್ಣಿನ ದೃಷ್ಟಿಯನ್ನು ಮತ್ತು ಕೈಯ ಬಳಕೆಯನ್ನು ಕಳೆದುಕೊಂಡಿದ್ದಾರೆ ಎಂದು ಸಲ್ಮಾನ್ ರಶ್ದಿ ಅವರ ಏಜೆಂಟ್ ಹೇಳಿದ್ದಾರೆ ಎಂದು ಪ್ರಕಟಿತ ವರದಿಯೊಂದು ತಿಳಿಸಿದೆ

ಸಾಹಿತ್ಯಕ ಏಜೆಂಟ್ ಆಂಡ್ರ್ಯೂ ವೈಲಿ ಶನಿವಾರ ಪ್ರಕಟವಾದ ಲೇಖನದಲ್ಲಿ ರಶ್ದಿ ಅವರ ಕುತ್ತಿಗೆಗೆ ಮೂರು ಗಂಭೀರ ಗಾಯಗಳು ಮತ್ತು ಎದೆ ಮತ್ತು ರುಂಡಕ್ಕೆ ಇನ್ನೂ 14 ಗಾಯಗಳು ಸಂಭವಿಸಿವೆ ಎಂದು ಸ್ಪ್ಯಾನಿಷ್ ಭಾಷಾ ಪತ್ರಿಕೆ ಎಲ್ ಪೈಸ್ ಗೆ ತಿಳಿಸಿದರು.

ರಶ್ದಿ ಅವರ “ದಿ ಸಟಾನಿಕ್ ವರ್ಸಸ್” ಕಾದಂಬರಿ ಪ್ರಕಟವಾದ ನಂತರ , ಈ ಕಾದಂಬರಿಯು ಧರ್ಮ ನಿಂದನೆ ಮಾಡಿದೆ ಎಂದು ಇರಾನ್ ನ ಅಯತೊಲ್ಲಾ ರುಹೊಲ್ಲಾ ಖೊಮೇನಿ 1989ರಲ್ಲಿ ಫತ್ವಾ ಹೊರಡಿಸಿದ್ದರು ಮತ್ತು 75 ವರ್ಷದ ರಶ್ದಿ ತಲೆಮರೆಸಿಕೊಂಡಿದ್ದರು. ಆದರೆ ಕಳೆದ ಎರಡು ದಶಕಗಳಲ್ಲಿ, ರಶ್ದಿ ಮುಕ್ತವಾಗಿ ಪ್ರಯಾಣಿಸುತ್ತಿದ್ದು, ಅವರ ಮೇಲೆ ಆಗಸ್ಟ್ ನಲ್ಲಿ ಪಶ್ಚಿಮ ನ್ಯೂಯಾರ್ಕ್ ನಲ್ಲಿ ನಡೆದ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ದಾಳಿಯಾಗಿದೆ.

Join Whatsapp
Exit mobile version