Home ಟಾಪ್ ಸುದ್ದಿಗಳು ರೂಪಾಯಿ ಕುಸಿಯುತ್ತಿಲ್ಲ,  ಆದರೆ ಡಾಲರ್ ಬಲಗೊಳ್ಳುತ್ತಿದೆ : ನಿರ್ಮಲಾ ಸೀತಾರಾಮನ್

ರೂಪಾಯಿ ಕುಸಿಯುತ್ತಿಲ್ಲ,  ಆದರೆ ಡಾಲರ್ ಬಲಗೊಳ್ಳುತ್ತಿದೆ : ನಿರ್ಮಲಾ ಸೀತಾರಾಮನ್

ವಾಷಿಂಗ್ಟನ್ : ರೂಪಾಯಿ ಕುಸಿಯುತ್ತಿಲ್ಲ,  ಆದರೆ ಡಾಲರ್ ಬಲಗೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಾಷಿಂಗ್ಟನ್ ನಲ್ಲಿ ನಡೆದ ಐಎಂಎಫ್ ಮತ್ತು ವಿಶ್ವಬ್ಯಾಂಕ್ ನ ವಾರ್ಷಿಕ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೂಪಾಯಿ ಕುಸಿಯುತ್ತಿದೆ ಎನ್ನುವುದಕ್ಕಿಂತಲೂ ಡಾಲರ್ ಬಲಗೊಳ್ಳುತ್ತಿದೆ ಎನ್ನುವ ದೃಷ್ಟಿಕೋನ ನನ್ನದು. ಡಾಲರ್ ಮೌಲ್ಯವು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ ಎಂದು ಹೇಳಿದ್ದಾರೆ.

ಇತರ ಎಲ್ಲಾ ಕರೆನ್ಸಿಗಳು ಬಲಪಡಿಸುವ ಡಾಲರ್ ವಿರುದ್ಧ ಕಾರ್ಯನಿರ್ವಹಿಸುತ್ತಿವೆ. ನಾನು ತಾಂತ್ರಿಕ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ ಆದರೆ ಭಾರತದ ರೂಪಾಯಿ ಈ ಡಾಲರ್ ದರ ಏರಿಕೆಯನ್ನು ಸಹಿಸಿಕೊಂಡಿದೆ ಎನ್ನುವುದು ಸತ್ಯಸಂಗತಿ. ಪ್ರವರ್ಧಮಾನಕ್ಕೆ ಬರುತ್ತಿರುವ ಬೇರೆ ದೇಶಗಳ ಕರೆನ್ಸಿಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿ ಭಾರತದ ಕರೆನ್ಸಿ ಇದೆ  ಎಂದು ಅವರು ತಿಳಿಸಿದ್ದಾರೆ.

ಭಾರತದ ಆರ್ಥಿಕ ತಳಹದಿಯು ಬಲಿಷ್ಠವಾಗಿದ್ದು, ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಹಣದುಬ್ಬರವು ಕಡಿಮೆಯೇ ಇದೆ ಎಂದರು.

ಹಣಕಾಸು ಸಚಿವರ ಈ ಹೇಳಿಕೆಗೆ ಪ್ರತಿಪಕ್ಷಗಳು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರೆ, ಬಿಜೆಪಿ ಅವರನ್ನು ಸಮರ್ಥಿಸಿಕೊಂಡಿದೆ.

Join Whatsapp
Exit mobile version