ನವದೆಹಲಿ: ಕಳೆದ ಮೂರು ದಿನಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ತೀವ್ರ ಕುಸಿತ ಕಂಡಿದ್ದು, ಇದೀಗ ಮತ್ತೆ 7 ಪೈಸೆ ಕುಸಿತ ಕಂಡು ಡಾಲರ್ ಎದುರು ರೂಪಾಯಿ ಬರೋಬ್ಬರಿ 80.02 ಗೆ ಇಳಿದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಕಚ್ಚಾ ತೈಲದ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಪ್ರತಿ ಬ್ಯಾರೆಲ್’ಗೆ 100 ಡಾಲರ್ ಇಳಿಕೆಯಾಗಿದೆ. ಈ ಮಧ್ಯೆ ರೂಪಾಯಿ ಮೌಲ್ಯ ನಿರಂತರ ಕುಸಿತಕೊಳಗಾಗುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡಿರುವ ಬಂಡವಾಳದ ಮೊತ್ತವನ್ನು ವಿದೇಶಿ ಕಂಪೆನಿಗಳು ಹಿಂಪಡೆದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.