ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಕುಸಿತ ಕಂಡಿದ್ದು, ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 80 ರೂ.ಗೆ ತಲುಪಿದೆ.
ಸೋಮವಾರ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 79.76 ರೂಪಾಯಿ ಮೂಲಕ ವಹಿವಾಟು ಆರಂಭಿಸಿ, ಮಧ್ಯಂತರದಲ್ಲಿ 80 ರೂ. ಗಡಿ ದಾಟಿದೆ. ಕಡೆಗೆ ಕೊಂಚ ಚೇತರಿಸಿಕೊಂಡು 16 ಪೈಸೆ ಇಳಿಕೆ ಆಗಿ ದಿನ ಅಂತ್ಯಕ್ಕೆ 79.98 ರೂ.ಗೆ ವಿನಿಮಯ ದರ ದಾಖಲಿಸಿದೆ. ಇದೀಗ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಶೇ.0.03 ಕುಸಿತದೊಂದಿಗೆ ಮತ್ತೆ 80.02 ರೂ. ಗಡಿ ದಾಟಿದೆ.
ಕಳೆದ ಎಂಟು ವರ್ಷಗಳಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 16.08 (ಶೇ. 25.39) ಕುಸಿದಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಾಹಿತಿ ನೀಡಲಾತಿತ್ತು.