Home ಟಾಪ್ ಸುದ್ದಿಗಳು ಬಿಜೆಪಿ ಸೇರ್ಪಡೆ ಬಗ್ಗೆ ವದಂತಿ: ನಟ ಪ್ರಕಾಶ್ ರಾಜ್ ಹೇಳಿದ್ದೇನು?

ಬಿಜೆಪಿ ಸೇರ್ಪಡೆ ಬಗ್ಗೆ ವದಂತಿ: ನಟ ಪ್ರಕಾಶ್ ರಾಜ್ ಹೇಳಿದ್ದೇನು?

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಮುಖಂಡರು ಆ ಪಕ್ಷದಿಂದ ಈ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ವರದಿಯಾಗುತ್ತಿದೆ.

ಈ ಹಿನ್ನೆಯಲ್ಲಿ ‘ಎಕ್ಸ್’ ಬಳಕೆದಾರರೋರ್ವರು, ಮಧ್ಯಾಹ್ನ 3 ಗಂಟೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ವ್ಯಂಗ್ಯವಾಡುವ ಉದ್ದೇಶದಿಂದ ಟ್ವೀಟ್ ಮಾಡಿದ್ದರು. ಇದು ವ್ಯಾಪಕ ವೈರಲ್ ಆಗಿದೆ.


ಈ ವದಂತಿ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಾಕಿರುವ ಪ್ರಕಾಶ್ ರಾಜ್, “ಬಿಜೆಪಿಯವರು ನನ್ನನ್ನು ಖರೀದಿಸುವಷ್ಟು ಸೈದ್ಧಾಂತಿಕವಾಗಿ ಶ್ರೀಮಂತರಲ್ಲ ಎಂದು ಅವರು ಅರಿತುಕೊಂಡಿರಬೇಕು ಎಂದು ನಾನು ಭಾವಿಸುತ್ತೇನೆ. ನೀವು ಏನು ಯೋಚಿಸುತ್ತೀರಿ ಸ್ನೇಹಿತರೇ” ಎಂದು ಹೇಳಿ ಎಂದು ಸ್ಪಷ್ಟನೆ ನೀಡಿದ್ದಾರೆ.

Join Whatsapp
Exit mobile version