Home ಟಾಪ್ ಸುದ್ದಿಗಳು ನಿಯಮ ಪಾಲಿಸದ ಶಾಲಾ ವಾಹನಗಳನ್ನು ಸೀಝ್ ಮಾಡಿದ RTO ಅಧಿಕಾರಿಗಳು

ನಿಯಮ ಪಾಲಿಸದ ಶಾಲಾ ವಾಹನಗಳನ್ನು ಸೀಝ್ ಮಾಡಿದ RTO ಅಧಿಕಾರಿಗಳು

ಬೆಂಗಳೂರು: ಅನಧಿಕೃತವಾಗಿ ಒಮ್ನಿ ಕಾರುಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆ ಬೆಂಗಳೂರಿನಲ್ಲಿ RTO ಅಧಿಕಾರಿಗಳು 15ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.


ವೈಟ್ಬೋರ್ಡ್ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವ ಕುರಿತು ದೂರು ಬಂದ ಹಿನ್ನೆಲೆ ಇಂದು ಶಾಲಾ ವಾಹನಗಳನ್ನ ತಡೆದು RTO ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಈ ವೇಳೆ ಅನಧಿಕೃತವಾಗಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.


ಈ ಬಗ್ಗೆ RTO ಜಂಟಿ ಆಯುಕ್ತೆ ಶೋಭಾ ಪ್ರತಿಕ್ರಿಯೆ ನೀಡಿದ್ದು, ಶಾಲಾ ಮಕ್ಕಳ ಸುರಕ್ಷತೆ, ಸಂಚಾರ ಬಗ್ಗೆ ಕಾರ್ಯಾಚರಣೆ ಮಾಡಲಾಗ್ತಿದೆ. ಸುರಕ್ಷತೆ ಇಲ್ಲದ ವಾಹನಗಳಲ್ಲಿ ಮಕ್ಕಳನ್ನ ಕರೆದೊಯ್ಯಲು ಅವಕಾಶ ಇಲ್ಲ. ಅದಕ್ಕೆ ರೇಡ್ ಮಾಡಿ ಅನಧಿಕೃತ ವಾಹನಗಳನ್ನ ಸೀಜ್ ಮಾಡಿದ್ದೇವೆ ಎಂದರು.

Join Whatsapp
Exit mobile version