Home ಟಾಪ್ ಸುದ್ದಿಗಳು ನಕಲಿ ಅಂಕಪಟ್ಟಿ ಆರೋಪ: ವಕೀಲ ಜಗದೀಶ್‌ ವಿರುದ್ಧ ಆರ್‌ಟಿಐ ಕಾರ್ಯಕರ್ತನಿಂದ ದೂರು ದಾಖಲು

ನಕಲಿ ಅಂಕಪಟ್ಟಿ ಆರೋಪ: ವಕೀಲ ಜಗದೀಶ್‌ ವಿರುದ್ಧ ಆರ್‌ಟಿಐ ಕಾರ್ಯಕರ್ತನಿಂದ ದೂರು ದಾಖಲು

ಬೆಂಗಳೂರು: ವಕೀಲ ಜಗದೀಶ್ ಕೆ.ಎನ್‌.ಮಹಾದೇವ್ ಅವರ ದ್ವಿತೀಯ ಪಿಯುಸಿ ಅಂಕಪಟ್ಟಿ ನಕಲಿಯಾಗಿದ್ದು, ಅದನ್ನು ಸಲ್ಲಿಸಿ ಅವರು ಕಾನೂನು ಪದವಿ ಪಡೆದಿದ್ದಾರೆ’ ಎಂದು ಆರೋಪಿಸಿ ಆರ್ ಟಿಐ ಕಾರ್ಯಕರ್ತ ವೆಂಕಟೇಶ ಎಂಬುವರು ದೂರು ದಾಖಲಿಸಿದ್ದಾರೆ. ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಗದೀಶ್‌ ಅವರ ಅಂಕಪಟ್ಟಿಯ ಜೆರಾಕ್ಸ್‌ ಪ್ರತಿ ಪಡೆದು ಪರಿಶೀಲಿಸಿದಾಗ ಅದು ಉದಯಪುರದ ರಾಜಸ್ಥಾನ ವಿದ್ಯಾಪೀಠದಿಂದ ನೀಡಿರುವುದು ಗಮನಕ್ಕೆ ಬಂದಿತ್ತು. ಅವರು 600ಕ್ಕೆ 388 ಅಂಕ ಗಳಿಸಿರುವುದನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು. ರಾಜಸ್ಥಾನ ವಿದ್ಯಾಪೀಠವು ರಾಜಸ್ಥಾನ ಸೆಕೆಂಡರಿ ಎಜುಕೇಷನ್‌ ಬೋರ್ಡ್‌ನಿಂದ ಯಾವುದೇ ಮಾನ್ಯತೆ ಗಳಿಸಿಲ್ಲ ಎಂದು ವೆಂಕಟೇಶ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಆರೋಪಗಳಲ್ಲಿ ಹುರುಳಿಲ್ಲ. ನಾನು ವ್ಯಾಸಂಗ ಮಾಡಿರುವ ರಾಜಸ್ಥಾನ ವಿದ್ಯಾಪೀಠವು ಯುಜಿಸಿಯಿಂದ ಮಾನ್ಯತೆ ಹೊಂದಿದೆ. ನ್ಯಾಕ್‌ನಿಂದ ‘ಎ’ ಗ್ರೇಡ್‌ ಪಡೆದಿದೆ’ ಎಂದು ಜಗದೀಶ್‌ ಪ್ರತಿಕ್ರಿಯಿಸಿದ್ದಾರೆ

Join Whatsapp
Exit mobile version