ಪುತ್ತೂರು | ಬೈಕ್ ಅಪಘಾತದಲ್ಲಿ ಆರೆಸ್ಸೆಸ್ ಮುಖಂಡ ವೆಂಕಟರಮಣ ಹೊಳ್ಳ ಸಾವು

Prasthutha|

ಪುತ್ತೂರು : ಬೈಕ್ ಅಪಘಾತವೊಂದರಲ್ಲಿ ಆರೆಸ್ಸೆಸ್ ಮಂಗಳೂರು ವಿಭಾಗದ ಗ್ರಾಮ ವಿಕಾಸ್ ಪ್ರಮುಖ್ ವೆಂಕಟರಮಣ ಹೊಳ್ಳ ಇಂದು ಸಾವಿಗೀಡಾಗಿದ್ದಾರೆ.

ಪುತ್ತೂರು ಪೊಲೀಸ್ ವಸತಿ ನಿಲಯಗಳ ಬಳಿಯ ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ರಾತ್ರಿ ತಂಗಿದ್ದು, ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬಂಟ್ವಾಳದ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುವ ವೇಳೆ ಪೋಳ್ಯ ಸಮೀಪದ ಪೊಲೀಸ್ ಬ್ಯಾರಿಕೇಡ್ ಬಳಿಕ ಅಪಘಾತ ಸಂಭವಿಸಿದೆ.

- Advertisement -

ಅಪಘಾತ ಸ್ಥಳದಲ್ಲಿ ಬ್ಯಾರಿಕೇಡ್ ಮತ್ತು ಬೈಕ್ ಗೆ ಹಾನಿಯಾಗಿದೆ. ವೆಂಕಟರಮಣ ಅವರ ಮೃತದೇಹ ಘಟನೆ ನಡೆದ ತುಸುದೂರ ಬಿದ್ದಿದ್ದು, ತಲೆ ಜಜ್ಜಿದೆ. ಹೊಳ್ಳ ಅವರ ಬೈಕ್ ಗೆ ಯಾವುದೋ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿರಬಹುದೇ? ಎಂಬ ಸಂದೇಹ ವ್ಯಕ್ತವಾಗಿದೆ.

- Advertisement -