RSS ಸಿದ್ಧಾಂತ ಮಹಿಳೆಯರನ್ನು ಅಡುಗೆಮನೆಗೆ ಸೀಮಿತಗೊಳಿಸುತ್ತದೆ: ರಾಹುಲ್ ಗಾಂಧಿ

Prasthutha|

ಭಾರತದ ಮರ್ಯಾದೆ ತೆಗೆಯಲೆಂದೇ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದಾರೆ ಎಂದ ಬಿಜೆಪಿ

- Advertisement -

ಡಲ್ಲಾಸ್(ಟೆಕ್ಸಾಸ್): ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಡಲ್ಲಾಸ್ ಮತ್ತು ಟೆಕ್ಸಾಸ್ ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ವೇಳೆ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಜನತಾ ಪಕ್ಷದ ಮೂಲ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಭಾರತವನ್ನು ಒಂದು ಕಲ್ಪನೆ ಎಂದು ನಂಬುತ್ತದೆ, ಆದರೆ ನಮ್ಮ ಪಕ್ಷವಾದ ಕಾಂಗ್ರೆಸ್ ಭಾರತವು ಬಹುಸಂಖ್ಯೆಯ ವಿಚಾರಗಳನ್ನು ನಂಬುತ್ತದೆ ಎಂದು ಭಾವಿಸುತ್ತೇವೆ.

- Advertisement -

ಭಾರತವು ಒಂದು ಕಲ್ಪನೆ ಎಂದು ಆರ್‌ ಎಸ್‌ ಎಸ್ ನಂಬಿದರೆ ಭಾರತವು ಅನೇಕ ಕಲ್ಪನೆಗಳ ಬಹುಸಂಖ್ಯೆಯನ್ನು ಹೊಂದಿರುವ ದೇಶ ಎಂದು ಭಾವಿಸುತ್ತದೆ. ಪ್ರತಿಯೊಬ್ಬರಿಗೂ ಭಾಗವಹಿಸಲು ಅವಕಾಶ ನೀಡಬೇಕು, ಕನಸು ಕಾಣಲು ಅವಕಾಶ ನೀಡಬೇಕು ಮತ್ತು ಅವರ ಜಾತಿ, ಭಾಷೆ, ಧರ್ಮ, ಸಂಪ್ರದಾಯ ಅಥವಾ ಇತಿಹಾಸವನ್ನು ಲೆಕ್ಕಿಸದೆ ಅವಕಾಶ ನೀಡಬೇಕೆಂದು ನಾವು ನಂಬುತ್ತೇವೆ ಎಂದರು.

ಭಾರತೀಯ ರಾಜಕೀಯದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಾಣೆಯಾಗಿದೆ, ನಾವೆಲ್ಲರೂ ಒಂದು ಎಂಬ ಪರಿಕಲ್ಪನೆ ಇಲ್ಲದಾಗಿದೆ, ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಗಳು ಮಹಿಳೆಯರು ಅಡುಗೆ ಮನೆಯಲ್ಲಿ ಇರಬೇಕೆಂದು ಬಯಸುತ್ತವೆ ಎಂದರು.

ಭಾರತದ ಪ್ರಧಾನಿ ಮೋದಿಯವರು ದೇಶದ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಭಾರತದಲ್ಲಿ ಲಕ್ಷಾಂತರ ಜನರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದು, ಅದು ಚುನಾವಣೆಯಲ್ಲಿ ಗೊತ್ತಾಗಿದೆ ಎಂದರು. ಇಂದು ನಾನು ಮಾತನಾಡುವ ಪ್ರತಿಯೊಂದು ಮಾತುಗಳು ಸಂವಿಧಾನದಲ್ಲಿ ಬೇರೂರಿದ್ದು, ಆಧುನಿಕ ಭಾರತದ ಅಡಿಪಾಯ ಎಂದು ಬಣ್ಣಿಸಿದರು. ಚುನಾವಣೆ ಸಂದರ್ಭದಲ್ಲಿ ಸಂವಿಧಾನವನ್ನು ಎತ್ತಿ ಹಿಡಿದಾಗ ಜನರಿಗೆ ಅವರ ಸಂದೇಶ ಅರ್ಥವಾಯಿತು ಎಂದರು.


ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಆರ್‌ ಎಸ್‌ ಎಸ್ ಬಗ್ಗೆ ತಿಳಿದುಕೊಳ್ಳಲು ರಾಹುಲ್ ಗಾಂಧಿ ಹಲವು ಜನ್ಮಗಳನ್ನು ಎತ್ತಿ ಬರಬೇಕು. ದೇಶದ್ರೋಹಿಯಾದ ಅವರು ಆರ್‌ಎಸ್‌ಎಸ್ ಅನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಟೀಕಿಸಿದ್ದಾರೆ.

ವಿದೇಶಕ್ಕೆ ಹೋಗಿ ದೇಶವನ್ನು ಟೀಕಿಸುವವರು ಆರ್‌ಎಸ್‌ಎಸ್ ಅನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವುದು ಭಾರತಕ್ಕೆ ಅವಮಾನ ಮಾಡಲು ಮಾತ್ರ ಎಂದು ಅನಿಸುತ್ತದೆ. ರಾಹುಲ್ ಗಾಂಧಿಗೆ ಈ ಜನ್ಮದಲ್ಲಿ ಆರ್​ಎಸ್​ಎಸ್​ ಅರ್ಥವಾಗುವುದಿಲ್ಲ. ಆರ್‌ಎಸ್‌ಎಸ್ ಭಾರತದ ಮೌಲ್ಯಗಳು ಮತ್ತು ಸಂಸ್ಕೃತಿಯಿಂದ ಹುಟ್ಟಿದೆ ಎಂದು ಅವರು ಹೇಳಿದ್ದಾರೆ.



Join Whatsapp
Exit mobile version