Home ಟಾಪ್ ಸುದ್ದಿಗಳು “ಆರೆಸ್ಸೆಸ್: ಆಳ ಮತ್ತು ಅಗಲ” ಕೃತಿ ಇಂಗ್ಲಿಷ್, ಮಲಯಾಳಂ ಸೇರಿ ಐದು ಭಾಷೆಗಳಿಗೆ ಅನುವಾದ

“ಆರೆಸ್ಸೆಸ್: ಆಳ ಮತ್ತು ಅಗಲ” ಕೃತಿ ಇಂಗ್ಲಿಷ್, ಮಲಯಾಳಂ ಸೇರಿ ಐದು ಭಾಷೆಗಳಿಗೆ ಅನುವಾದ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್)ನ ನೈಜ ಉದ್ದೇಶ ಮತ್ತು ಕುತಂತ್ರವನ್ನು ಓದುಗರಿಗೆ ಬಹಳ ಸರಳ ರೀತಿಯಲ್ಲಿ ತಿಳಿಸಿಕೊಟ್ಟು ಅವರನ್ನು ಚಿಂತನೆಗೆ ಒಳಪಡಿಸುವ ನಾಡಿನ ಸಾಕ್ಷಿಪ್ರಜ್ಞೆ ಎಂದೆ ಕರೆಯಲ್ಪಡುವ ಸಾಹಿತಿ ದೇವನೂರು ಮಹಾದೇವ ಅವರು ಬರೆದ “ಆರ್ಎಸ್ಎಸ್: ಆಳ ಮತ್ತು ಅಗಲ” ಕೃತಿಗೆ ಇನ್ನಿಲ್ಲದ ಬೇಡಿಕೆ ಉಂಟಾಗಿದೆ. ಈ ಮಧ್ಯೆ ಪುಸ್ತಕ ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೂ ಅನುವಾದಗೊಳ್ಳುತ್ತಿದೆ.

64 ಪುಟಗಳ ಕಿರು ಪುಸ್ತಕದ ಬೆಲೆ 40 ರೂಪಾಯಿಯಾಗಿದೆ. ಪುಸ್ತಕ ಮುದ್ರಣ ಈ ತಿಂಗಳ ಅಂತ್ಯದಲ್ಲಿ ಒಂದು ಲಕ್ಷ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಪುಸ್ತಕದ ಅನುವಾದಕ್ಕಾಗಿ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪ್ರಕಾಶಕರು ಮುಂದೆ ಬಂದಿದ್ದು, ಅನುವಾದಗಳು ನಡೆಯುತ್ತಿವೆ. ತಮಿಳು ಭಾಷೆಗೆ ಬರಹಗಾರರಾದ ಕನಕರಾಜು ಅನುವಾದ ಮಾಡುತ್ತಿದ್ದು, ತಮಿಳುನಾಡಿನ ಯಾವರೂಂ ಪ್ರಕಾಶನ ಸಂಸ್ಥೆ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.

Join Whatsapp
Exit mobile version