ನವದೆಹಲಿ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಸೇರಿದಂತೆ ಹಲವು ಮುಸ್ಲಿಮ್ ಮುಖಂಡರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.
ಕಸ್ತೂರ್ಬಾ ಗಾಂಧಿ ಮಾರ್ಗ ಮಸೀದಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಯಿತು. ಆರೆಸ್ಸೆಸ್ ಮೂಲಗಳ ಪ್ರಕಾರ ಹಿಜಾಬ್ ವಿವಾದ, ಜ್ಞಾನವಾಪಿ ಮತ್ತು ಧರ್ಮಗಳ ನಡುವೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಮುಂತಾದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಭಾಗವತ್ ಅವರ ಜೊತೆ ಹಿರಿಯ ಆರೆಸ್ಸೆಸ್ ಸದಸ್ಯರಾದ ಡಾ. ಕೃಷ್ಣ ಗೋಪಾಲ್, ಇಂದ್ರೇಶ್ ಕುಮಾರ್, ರಾಮ್ಲಾಲ್ ಮತ್ತು ಕರಿಶ್ ಕುಮಾರ್ ಕೂಡ ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ಕೂಡ ಭಾಗವತ್ ಮುಸ್ಲಿಮ್ ಮುಖಂಡರ ಸಭೆಯನ್ನು ಕರೆದಿದ್ದರು. ಅಲ್ಲಿ ಇದೇ ವಿಚಾರನ್ನು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.