Home ಟಾಪ್ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ತನ್ನ ಸಾಂಪ್ರದಾಯಿಕ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿಕೊಂಡ RSS

ಸಾಮಾಜಿಕ ಜಾಲತಾಣದಲ್ಲಿ ತನ್ನ ಸಾಂಪ್ರದಾಯಿಕ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿಕೊಂಡ RSS

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್) ಶುಕ್ರವಾರ ತನ್ನ ಸಾಮಾಜಿಕ ಜಾಲತಾಣದ  ಪ್ರೊಫೈಲ್ ಚಿತ್ರವನ್ನು ತನ್ನ ಸಾಂಪ್ರದಾಯಿಕ ಕೇಸರಿ ಧ್ವಜದಿಂದ ರಾಷ್ಟ್ರಧ್ವಜಕ್ಕೆ ಬದಲಾಯಿಸಿದೆ.

ಭಾರತದ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಅಂಗವಾಗಿ ದೇಶವು ‘ಆಝಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿರುವಾಗ, ಆಗಸ್ಟ್ 2 ಮತ್ತು 15 ರ ನಡುವೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಪಿಕ್ಚರ್ ಆಗಿ ‘ತಿರಂಗಾ’ ಅನ್ನು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಒತ್ತಾಯಿಸಿದ್ದರು.

ಆರ್.ಎಸ್.ಎಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು  ಆಚರಿಸುವುದಿಲ್ಲ  ಎಂಬ ಆರೋಪ ಇತ್ತು. ಈ  ಕುರಿತು ವಿರೋಧ ಪಕ್ಷಗಳು  ಆರ್.ಎಸ್.ಎಸ್ ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

52 ವರ್ಷಗಳಿಂದ ನಾಗ್ಪುರದ ತನ್ನ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸದ ಸಂಘಟನೆಯು ‘ತಿರಂಗಾ’ವನ್ನು ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರವನ್ನಾಗಿ ಮಾಡುವ ಪ್ರಧಾನಿಯ ಸಂದೇಶವನ್ನು ಪಾಲಿಸುತ್ತದೆಯೇ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರ್ ಎಸ್ಎಸ್ ಅನ್ನು ಟೀಕಿಸಿದ್ದರು.

ತ್ರಿವರ್ಣ ಧ್ವಜದ ಕುರಿತು ಆರ್.ಎಸ್.ಎಸ್ ಹೊಂದಿರುವ ನಿಲುವಿನ ಕುರಿತು ಬಸವರಾಜ್ ಬೊಮ್ಮಾಯಿ ಅವರಿಗೆ  ಸಿದ್ಧರಾಮಯ್ಯ ಅವರು ಹಲವು ಪ್ರಶ್ನೆ ಕೇಳಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

Join Whatsapp
Exit mobile version