Home ಟಾಪ್ ಸುದ್ದಿಗಳು ಗೃಹಜ್ಯೋತಿ ಯೋಜನೆಯ 8,844 ಕೋಟಿ ರೂ. ಬಿಲ್ ಪಾವತಿಸಿದ ಸರ್ಕಾರ

ಗೃಹಜ್ಯೋತಿ ಯೋಜನೆಯ 8,844 ಕೋಟಿ ರೂ. ಬಿಲ್ ಪಾವತಿಸಿದ ಸರ್ಕಾರ

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಸಮರ್ಪಕ ಮುಂದುವರಿಕೆಗಾಗಿ ರಾಜ್ಯದ ಆರು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಖಾತೆಗಳಿಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ 8,844 ಕೋಟಿ ರೂ. ಹಣ ಪಾವತಿಸಲಾಗಿದೆ.


ಗೃಹ ಜ್ಯೋತಿ ಯೋಜನೆಯಡಿ ಮನೆಗಳಿಗೆ ನೀಡಲಾಗುವ ಶೂನ್ಯ ಬಿಲ್ಗಳಿಗೆ ಸರ್ಕಾರದ ವತಿಯಿಂದ ಪಾವತಿಸುತ್ತಿರುವ ಮೊತ್ತ ಇದಾಗಿದೆ.


ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, 1,70,90,681 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ, ಅದರಲ್ಲಿ ಶೂನ್ಯ-ಬಿಲ್ ಪ್ರಯೋಜನವನ್ನು 1.602 ಕೋಟಿಗೆ ವಿಸ್ತರಿಸಲಾಗುತ್ತಿದೆ. 1.65 ಕೋಟಿ ಕುಟುಂಬಗಳು ಶೂನ್ಯ ಬಿಲ್ ಪಡೆಯುತ್ತವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಒಂದು ವರ್ಷದ ಯೋಜನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.

Join Whatsapp
Exit mobile version