Home ಮಾಹಿತಿ 60 ರೂ. ಎಗರಿಸಿದ ಆರೋಪಿಯನ್ನು 27 ವರ್ಷ ಬಳಿಕ ಬಂಧಿಸಿದ ಪೊಲೀಸ್!

60 ರೂ. ಎಗರಿಸಿದ ಆರೋಪಿಯನ್ನು 27 ವರ್ಷ ಬಳಿಕ ಬಂಧಿಸಿದ ಪೊಲೀಸ್!

ಮಧುರೈ: 60 ರೂ. ಎಗರಿಸಿದ ಆರೋಪಿಯನ್ನು ಬರೋಬ್ಬರಿ 27 ವರ್ಷದ ಬಳಿಕ ಪೊಲೀಸರು ಅರೆಸ್ಟ್ ಮಾಡಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

55 ವರ್ಷದ ಶಿವಕಾಸಿಯ ಆರೋಪಿ ಪನ್ನಿರ್ ಸೆಲ್ವಂ ಅರೆಸ್ಟ್ ಆಗಿರುವ ಆರೋಪಿ. ಈತನ ಮೇಲಿರುವುದು 60 ರೂಪಾಯಿ ಎಗರಿಸಿದ ಪ್ರಕರಣ.


1997ರಲ್ಲಿ ಪನ್ನೀರ್ ಸೆಲ್ವಂಗೆ 28 ವಯಸ್ಸು. ಈ ವೇಳೆ ಪನ್ನೀರ್ ಸೆಲ್ವಂ ತೆಪ್ಪಾಕುಳಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 60 ರೂಪಾಯಿ ಎಗರಿಸಿದ್ದ. ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದ. 60 ರೂಪಾಯಿ ಆಗಿದ್ದ ಕಾರಣ ಅಂದು ಪೊಲೀಸರು ಹೆಚ್ಚಿನ ಆಸಕ್ತಿ ತೋರಲಿಲ್ಲ. ಆದರೂ ದೂರು ದಾಖಲಾಗಿದ್ದ ಕಾರಣ ಕಾನೂನು ಪ್ರಕ್ರಿಯೆ ಮುಗಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಾಹಿತಿ ಪಡೆದುಕೊಂಡು ಒಂದಷ್ಟು ದಿನ ತನಿಖೆ ನಡೆಸಿದ್ದರು. ಆದರೆ 60 ರೂಪಾಯಿ ಎಗರಿಸಿದ ಪನ್ನಿರ್ ಸೆಲ್ವಂ ನಾಪತ್ತೆಯಾಗಿದ್ದ.


ಸಣ್ಣ ಮೊತ್ತವಾದ ಕಾರಣ ಪೊಲೀಸರು ಈ ಪ್ರಕರಣವನ್ನು ಮತ್ತೆ ತನಿಖೆ ಮಾಡುವ ಪ್ರಯತ್ನ ಮಾಡಲಿಲ್ಲ. 28ರ ಹರೆಯಲ್ಲಿ 60 ರೂಪಾಯಿ ಎಗರಿಸಿ ನಾಪತ್ತೆಯಾದ ಪನ್ನರ್ ಸೆಲ್ವಂ ಶಿವಕಾಸಿ ನಿವಾಸಿಯಾಗಿದ್ದ ಪನ್ನಿರ್ ಸೆಲ್ವಂ, ಕಳ್ಳತನ ಆರೋಪದ ಬಳಿಕ ಜಕ್ಕತೊಪ್ಪುವಿಗೆ ಬಂದು ನೆಲೆಸಿದ್ದ. ಈತನ ಮದುವೆಯೂ ಆಯಿತು. ಸಂಸಾರ ಸಾಗಿತ್ತು. ಮಕ್ಕಳು ದೊಡ್ಡವರಾಗಿದ್ದಾರೆ.


ಇತ್ತೀಚೆಗೆ ಮಧುರೈ ಪೊಲೀಸ್ ಠಾಣೆಗೆ ಆಗಮಿಸಿದ ಅಸಿಸ್ಟೆಂಟ್ ಕಮಿಷನರ್ ಸೂರಾ ಕುಮಾರ್ ಹಳೆ ಪೆಂಡಿಂಗ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಮುಂಜಾಗಿದ್ದಾರೆ. ಇದಕ್ಕಾಗಿ ತಂಡವೊಂದನ್ನು ರಚಿಸಿ ಹಳೇ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಈ ಪೈಕಿ 27 ವರ್ಷಗಳ ಹಿಂದಿನ 60 ರೂಪಾಯಿ ಪ್ರರಕರಣದ ಫೈಲ್ ಕೂಡ ಸಿಕ್ಕಿದೆ. ಆರೋಪಿ ಮಾಹಿತಿ ಪಡೆದ ಪೊಲೀಸರು ಹೊಸ ವಿಧಾನದ ಮೂಲಕ ತನಿಖೆ ನಡೆಸಿದ್ದಾರೆ. ಶಿವಕಾಶಿಯಿಂದ ಪನ್ನಿರ್ ಸೆಲ್ವಂ ಸ್ಥಳಾಂತರವಾಗಿ ಎರಡು ದಶಕಗಳೇ ಕಳೆದಿದೆ ಅನ್ನೋ ಮಾಹಿತಿ ಲಭ್ಯವಾಗಿತ್ತು. ತನಿಖೆ ಮುಂದುವರಿಸಿದ ಪೊಲೀಸರು ಆರೋಪಿ ಪನ್ನಿರ್ ಸೆಲ್ವಂ ಪತ್ತೆ ಹಚ್ಚಿದ್ದಾರೆ. ಬಳಿಕ ಅರೆಸ್ಟ್ ಮಾಡಿದ್ದಾರೆ.


ಈ ಬಂಧನ ಸುದ್ದಿ ಹೊರಬೀಳುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 60 ರೂಪಾಯಿ ಕೇಸ್ 27 ವರ್ಷದ ಬಳಿಕ ಪತ್ತೆ ಹಚ್ಚುವ ಬದಲು ಸದ್ಯ ನಡೆಯುತ್ತಿರುವ ಅಪರಾಧಗಳು, ಕಿರುಕುಳ ಪ್ರಕರಣ ತಡೆಯಲಿ. 60 ರೂಪಾಯಿ ಎಗರಿಸಿದ ವ್ಯಕ್ತಿಯ ಮೇಲೆ ಈ ಒಂದು ಪ್ರಕರಣ ಹೊರತುಪಡಿಸಿ ಇನ್ಯಾವುದೇ ಕೇಸ್ ಇಲ್ಲ. ಒಂದು ರೂಪಾಯಿ ಕದ್ದರೂ ಕಳ್ಳನೇ. ಆದರೆ ರಾಜ್ಯದಲ್ಲಿ ಸಾವಿರಾರು ಕೋಟಿ ನುಂಗಿದ ನಾಯಕರು, ಅಧಿಕಾರಿಗಳು ರಾಜಾರೋಶವಾಗಿ ಓಡಾಡುತ್ತಿರುವಾಗ 60 ರೂಪಾಯಿ ಎಗರಿಸಿದ ಆರೋಪಿಯನ್ನು ಹಿಡಿದು ಯಾವ ಪೌರುಷ ತೋರಿಸಿದ್ದೀರಿ? ಎಂದು ಆಕ್ರೋಶ ಹೊರಹಾಕಿದ್ದಾರೆ.

Join Whatsapp
Exit mobile version