5 ರೂಪಾಯಿ ಕುರ್ ಕುರೆ ಪ್ಯಾಕ್ ನಲ್ಲಿ 500 ರೂ. ನೋಟ್: ಮುಗಿಬಿದ್ದ ಜನರು

Prasthutha|

ರಾಯಚೂರು : 5 ರೂಪಾಯಿ ಕುರ್ ಕುರೆ ಪ್ಯಾಕ್ ನಲ್ಲಿ 500 ರೂ.ಗರಿಗರಿ ನೋಟ್ ಸಿಕ್ಕಿದ್ದು, ಜನರು ಮುಗಿಬಿದ್ದ ಘಟನೆ ಲಿಂಗಸಗೂರು ತಾಲೂಕಿನ ಹುನೂರಿನಲ್ಲಿ ನಡೆದಿದೆ.

- Advertisement -

ಇದು ನಕಲಿ ನೋಟಲ್ಲ, ಅಸಲಿ ಎಂದು ಜನರು ಹೇಳಿದ್ದಾರೆ. ಮಾಕ್ಸ್ ವಿಟ್, ಪಂಜಾಬ್ ಸೇರಿ ವಿವಿಧ ಕಂಪನಿಯ ಪ್ಯಾಕೆಟ್ ಇದಾಗಿದ್ದು, ಒಂದೇ ಪ್ಯಾಕ್ ನಲ್ಲಿ 5 ರಿಂದ 6 ನೋಟ್ ಗಳು ಪತ್ತೆಯಾಗಿವೆ. ಹುನೂರು ಗ್ರಾಮದ ಬಹುತೇಕ ಅಂಗಡಿಗಳಲ್ಲಿ ಪತ್ತೆಯಾಗಿದ್ದು, 500 ರೂ.ಆಸೆಗಾಗಿ ಕುರ್ಕುರೆಗೆ  ಜನರು ಮುಗಿಬಿದ್ದಿದ್ದಾರೆ. ಮೂರು ದಿನದಲ್ಲಿ ಕುರ್ಕುರೆ ಸ್ಟಾಕ್ ಖಾಲಿಯಾಗಿದೆ. ಒಂದೇ ಮನೆಯವರಿಗೆ  12,500 ರೂಪಾಯಿ ಸಿಕ್ಕಿದೆ. ಲಕ್ಷಾಂತರ ರೂ. ನೋಟ್ ಗಳು ಕುರ್ಕುರೆ ಪ್ಯಾಕ್ ನಲ್ಲಿ ಸಿಕ್ಕಿರೋ ಮಾಹಿತಿ ದೊರಕಿದೆ ಎಂದು ಅಂಗಡಿಯ ಮಾಲಕರು ತಿಳಿಸಿದ್ದಾರೆ.

Join Whatsapp
Exit mobile version