Home ಟಾಪ್ ಸುದ್ದಿಗಳು 500 ರೂ. ಗ್ಯಾಸ್ ಸಿಲಿಂಡರ್, ಅಗ್ಗದ ಬೆಲೆಗೆ ಪೆಟ್ರೋಲ್, ಡೀಸೆಲ್: ರಾಹುಲ್ ಗಾಂಧಿ ಭರವಸೆ

500 ರೂ. ಗ್ಯಾಸ್ ಸಿಲಿಂಡರ್, ಅಗ್ಗದ ಬೆಲೆಗೆ ಪೆಟ್ರೋಲ್, ಡೀಸೆಲ್: ರಾಹುಲ್ ಗಾಂಧಿ ಭರವಸೆ

ನವದೆಹಲಿ: 500 ರೂ.ಗಳಿಗೆ ಗ್ಯಾಸ್ ಸಿಲಿಂಡರ್, ಅಗ್ಗದ ದರಕ್ಕೆ ಪೆಟ್ರೋಲ್, ಡೀಸೆಲ್, ಉದ್ಯೋಗ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.


ಜನರ ಸಮಸ್ಯೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿ ಜನತೆಗೆ ಪತ್ರ ಬರೆದಿರುವ ಅವರು, ಜನರ ದೈನಂದಿನ ಜೀವನಕ್ಕೆ ಬೇಕಾಗುವ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ಉದ್ಯೋಗದ ಕುರಿತು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


ಜನವರಿ 30ರಂದು ಭಾರತ್ ಜೋಡೋ ಯಾತ್ರೆ ಸಮಾಪನಗೊಳ್ಳಲಿದೆ. ಜನವರಿ 26ರಿಂದಲೇ ಕೇಂದ್ರದ ವಿರುದ್ದ ಚಾರ್ಜ್ ಶೀಟ್ ಜೊತೆಗೆ ರಾಹುಲ್ ಗಾಂಧಿ ಜನರಿಗೆ ಬರೆದ ಪತ್ರವನ್ನು ಮನೆಮನೆಗೆ ತಲುಪಿಸುವುದಾಗಿ ಕಾಂಗ್ರೆಸ್ ಹೇಳಿದೆ. ಆಪ್ಕಾ ಅಪ್ನಾ ರಾಹುಲ್ ಎಂದು ಪತ್ರಕ್ಕೆ ಸಹಿ ಹಾಕಲಾಗಿದ್ದು, ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಪತ್ರ ಬರೆಯಲಾಗಿದೆ.

Join Whatsapp
Exit mobile version