Home ಕರಾವಳಿ ಸೌದಿ ಕರೆನ್ಸಿ ನೀಡುವುದಾಗಿ 4 ಲಕ್ಷ ರೂ ವಂಚನೆ; ದೂರು ದಾಖಲು

ಸೌದಿ ಕರೆನ್ಸಿ ನೀಡುವುದಾಗಿ 4 ಲಕ್ಷ ರೂ ವಂಚನೆ; ದೂರು ದಾಖಲು

ಮಂಗಳೂರು: ಸೌದಿ ಅರೇಬಿಯಾದ ಕರೆನ್ಸಿ ಎಂದು ಹಣ ಪಡೆದು ಕಾಗದದ ಕಟ್ಟನ್ನು ನೀಡಿ 4ಲಕ್ಷ ರೂ. ವಂಚಿಸಿರುವ ಘಟನೆ ಕುರಿತು ದೂರು ದಾಖಲಾಗಿದೆ.

ಮುಡಿಪುವಿನಲ್ಲಿರುವ ತಾಜ್‌ ಬುಕ್‌ ಸ್ಟಾಲ್‌ ಎಂಬ ಅಂಗಡಿಗೆ ಬಂದಿದ್ದ ಓರ್ವ ಅಪರಿಚಿತ ಸೌದಿ ಅರೇಬಿಯಾದ ಕರೆನ್ಸಿ ಮತ್ತು ಚಿನ್ನ ಇದ್ದು ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿದ್ದಾನೆ.

ಇದಕ್ಕೆ ಒಪ್ಪಿದ ಅಂಗಡಿಯಾತನಿಗೆ ಕರೆ ಮಾಡಿ 4 ಲಕ್ಷ.ರೂ.ಗಳೊಂದಿಗೆ ಮಂಗಳೂರಿಗೆ ಬಂದು ಕರೆ ಮಾಡುವಂತೆ ಆರೋಪಿ ತಿಳಿಸಿದ್ದ.ಅದರಂತೆ ಅಂಗಡಿಯಾತ ನಿನ್ನೆ ಆತನಿಗೆ ಕರೆಮಾಡಿ ನಗರದ ಸ್ಟೇಟ್‌ಬ್ಯಾಂಕ್‌ ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಹೋಗುವ ಮೈದಾನದ ಬಳಿ ಇರುವ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಕಾಯುವಂತೆ ತಿಳಿಸಿದ್ದಾನೆ.ಇದರಂತೆ ಅಂಗಡಿ‌ ಮಾಲಕ ಕಾದು ನಿಂತಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಅಂಗಡಿಯಾತನಿಂದ 4 ಲಕ್ಷ ರೂ.ಪಡೆದು ಆತನ ಕೈಯಲ್ಲಿದ್ದ ಪ್ಲಾಸ್ಟಿಕ್‌ ಕಟ್ಟನ್ನು ನೀಡಿ ತೆರಳಿದ್ದಾನೆ.

ಅಂಗಡಿಯಾತ ಕಟ್ಟನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಕಾಗದ ತುಂಡುಗಳನ್ನು ಮಡಚಿ ಒಂದರ ಮೇಲೆ ಒಂದರಂತೆ ನೋಟಿನಂತೆ ಇಟ್ಟಿರುವುದು ಕಂಡು ಬಂದಿದೆ.

Join Whatsapp
Exit mobile version