Home ಟಾಪ್ ಸುದ್ದಿಗಳು ಗುಜರಾತ್ ನಲ್ಲಿ 350 ಕೋಟಿ ರೂ. ಮೌಲ್ಯದ 50 ಕೆಜಿ ಹೆರಾಯಿನ್ ವಶ

ಗುಜರಾತ್ ನಲ್ಲಿ 350 ಕೋಟಿ ರೂ. ಮೌಲ್ಯದ 50 ಕೆಜಿ ಹೆರಾಯಿನ್ ವಶ

ಅಹ್ಮದಾಬಾದ್: 350 ಕೋಟಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯದ 50 ಕೆಜಿ ಹೆರಾಯಿನ್ ಹೊಂದಿರುವ ಪಾಕಿಸ್ತಾನದ ದೋಣಿಯನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಮತ್ತು ಗುಜರಾತ್ ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದೆ.

ಭಾರತೀಯ ಕೋಸ್ಟ್ ಗಾರ್ಡ್, ಎಟಿಎಸ್ ಗುಜರಾತ್ ನೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ, 6 ಸಿಬ್ಬಂದಿ ಸದಸ್ಯರು ಮತ್ತು 350 ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯದ 50 ಕೆಜಿ ಹೆರಾಯಿನ್ ಹೊಂದಿರುವ ಪಾಕಿಸ್ತಾನದ ದೋಣಿ ಅಲ್ ಸಕರ್ ಅನ್ನು ಇಂದು ಮುಂಜಾನೆ ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ (ಐಎಂಬಿಎಲ್) ಗೆ ಸಮೀಪದಲ್ಲಿ ವಶಕ್ಕೆ ಪಡೆದಿದೆ ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ದೋಣಿಯನ್ನು ಜಖೌಗೆ ತರಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಎಟಿಎಸ್ ನೊಂದಿಗೆ ಐಸಿಜಿ ನಡೆಸಿದ 6ನೇ ಕಾರ್ಯಾಚರಣೆ ಇದಾಗಿದ್ದು, ಸೆಪ್ಟೆಂಬರ್ 14 ರಂದು ಸುಮಾರು 200 ಕೋಟಿ ರೂಪಾಯಿ ಮೌಲ್ಯದ 40 ಕೆಜಿ ಹೆರಾಯಿನ್ ಅನ್ನು ಪಾಕಿಸ್ತಾನದ ದೋಣಿಯಿಂದ ವಶಪಡಿಸಿಕೊಂಡಿತ್ತು  ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ..

ದೋಣಿಯಲ್ಲಿದ್ದ ಆರು ಜನರನ್ನು ಮತ್ತು ಪಾಕಿಸ್ತಾನಿ ಪ್ರಜೆಗಳೆಂದು ಶಂಕಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ದೋಣಿಯನ್ನು ಕಛ್ ನ ಜಖಾವೊ ಬಂದರಿಗೆ ತರಲಾಗುತ್ತಿದೆ.

ಭಾರತೀಯ ಕೋಸ್ಟ್ ಗಾರ್ಡ್, ಎಟಿಎಸ್ ಗುಜರಾತ್ ನೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ, 6 ಸಿಬ್ಬಂದಿ ಸದಸ್ಯರು ಮತ್ತು 350 ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯದ 50 ಕೆಜಿ ಹೆರಾಯಿನ್ ಹೊಂದಿರುವ ಪಾಕಿಸ್ತಾನದ ದೋಣಿ ಅಲ್ ಸಕರ್ ಅನ್ನು ಅಕ್ಟೋಬರ್ 8 ರಂದು ಮುಂಜಾನೆ ಅಂತರರಾಷ್ಟ್ರೀಯ ಕಡಲ ಗಡಿ ರೇಖೆಯ ಸಮೀಪ ವಶಪಡಿಸಿಕೊಂಡಿದೆ. ಹೆಚ್ಚಿನ ತನಿಖೆಗಾಗಿ ದೋಣಿಯನ್ನು ಜಖೌಗೆ ತರಲಾಗಿದೆ.

Join Whatsapp
Exit mobile version