Home ಟಾಪ್ ಸುದ್ದಿಗಳು 350 ಕೋಟಿ ರೂ. ಮೌಲ್ಯದ 70 ಕೆಜಿ ಹೆರಾಯಿನ್ ವಶ..!

350 ಕೋಟಿ ರೂ. ಮೌಲ್ಯದ 70 ಕೆಜಿ ಹೆರಾಯಿನ್ ವಶ..!

ಅಹಮದಾಬಾದ್: ಕುಚ್ ಜಿಲ್ಲೆಯ ಮುಂಡ್ರಾ ಬಂದರಿನಲ್ಲಿ ಕಾರ್ಯಾಚರಣೆ ನಡೆಸಿರುವ ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಭಾರೀ ಪ್ರಮಾಣದ ಮಾದಕ ವಸ್ತುವನ್ನು ಪತ್ತೆ ಹಚ್ಚಿದೆ.  350 ಕೋಟಿ ರೂ.ಗೂ ಹೆಚ್ಚು ಮೌಲ್ಯದ 70 ಕೆಜಿ ಹೆರಾಯಿನ್ ಅನ್ನು ಜಪ್ತಿಮಾಡಿದೆ.

ಬೇರೆ ದೇಶದಿಂದ ಆಗಮಿಸಿದ ಕಂಟೈರ್ನಲ್ಲಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಎಟಿಎಸ್ ಶೋಧ ಕಾರ್ಯಾಚರಣೆ ನಡೆಸಿತ್ತು.

ಬಂದರಿನಿಂದ ಹೊರಗಡೆ ನಿಲ್ಲಿಸಲಾಗಿದ್ದ ಕಂಟೈರ್ನಲ್ಲಿ ಸರಕುಸಾಗಾಣಿಕೆಯೊಂದಿಗೆ ಮಾದಕವಸ್ತು ಅಡಗಿಸಲಾಗಿತ್ತು. ಎಟಿಎಸ್ ಜತೆಗೆ ಕಂದಾಯ ಗುಪ್ತಚರ ಇಲಾಖೆ ಕೂಡ ಕಾರ್ಯಾಚರಣೆಗೆ ಕೈ ಜೋಡಿಸಿದ್ದು, ಕಂಟೈನರ್ನ ನ್ನು ಜಪ್ತಿ ಮಾಡಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಮಾರು 21ಸಾವಿರ ಕೋಟಿ ಬೆಲೆ ಬಾಳುವ 3ಸಾವಿರ ಕೆಜಿ ಹೆರಾಯಿನನ್ನು ಕಂದಾಯ ಗುಪ್ತಚರ ಇಲಾಖೆ ಜಪ್ತಿ ಮಾಡಿತ್ತು. ಕಳೆದ ಏಪ್ರಿಲ್ ನಲ್ಲಿ 1439 ಕೋಟಿ ಮೊತ್ತದ 205 ಕೆಜಿ ಹೆರಾಯಿನ್ ಅನ್ನು ಕಚ್ ಜಿಲ್ಲೆಯ ಕಂಡ್ಲಾ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದೇ ಸಮಯದಲ್ಲಿ 450 ಕೋಟಿ ರೂ. ಬೆಲೆ ಬಾಳುವ 90 ಕೆಜಿ ಹೆರಾಯಿನ್ನಟನ್ನು ಅಂಬ್ರೇಲಿ ಜಿಲ್ಲೆಯ ಪೈಪಾವವ್ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಈ ವರ್ಷದ ಆರಂಭದಲ್ಲಿ 500 ಕೋಟಿ ಬೆಲೆ ಬಾಳುವ 56 ಕೆಜಿ ಕೊಕೈನ್ನಕನ್ನು ಮುಂಡ್ರಾ ಬಂದರಿನಲ್ಲಿ ಜಪ್ತಿ ಮಾಡಲಾಗಿತ್ತು.

Join Whatsapp
Exit mobile version