Home ಟಾಪ್ ಸುದ್ದಿಗಳು ಹೇಮಂತ್ ಸೊರೇನ್ ಗೆ ಸೇರಿದ 31 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ಹೇಮಂತ್ ಸೊರೇನ್ ಗೆ ಸೇರಿದ 31 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ರಾಂಚಿ: ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಸೇರಿದ 31 ಕೋಟಿ ಮೌಲ್ಯದ 8.86 ಎಕರೆ ಭೂಮಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.


ಗುರುವಾರ ಈ ಕುರಿತು ಮಾಹಿತಿ ನೀಡಿದ ಇ.ಡಿ, ಹೇಮಂತ್ ಸೊರೇನ್ ಮತ್ತು ಅವರ ಸಹಚರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.


ಹೇಮಂತ್ ಸೊರೇನ್ ಮತ್ತು ಇತರ ನಾಲ್ವರಾದ ಭಾನು ಪ್ರತಾಪ್ ಪ್ರಸಾದ್, ರಾಜ್ ಕುಮಾರ್ ಪಹಾನ್, ಹಿಲರಿಯಾಸ್ ಮತ್ತು ಬಿನೋದ್ ಸಿಂಗ್ ವಿರುದ್ಧ ಮಾರ್ಚ್ 30 ರಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯಡಿ ವಿಶೇಷ ನ್ಯಾಯಾಲಯದಲ್ಲಿ ಇ.ಡಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಅಲ್ಲದೇ 8.86 ಎಕರೆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

Join Whatsapp
Exit mobile version