ಮುಂಬೈ: ಕೆಫೆ ಕಾಫಿ ಡೇಯ ಮಾಲೀಕತ್ವ ಹೊಂದಿರುವ ಕಾಫಿಡೇ ಎಂಟರ್ ಪ್ರೈಸಸ್ ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ 26 ಕೋಟಿ ರೂ. ದಂಡ ವಿಧಿಸಿದೆ.
ದಂಡದ ಮೊತ್ತವನ್ನು 45 ದಿನಗಳ ಒಳಗೆ ಪಾವತಿಸುವಂತೆ ಸೂಚಿಸಿದೆ. ಪ್ರವರ್ತಕರಿಗೆ ಸಂಬಂಧಿಸಿದ ಕಂಪನಿಗೆ ಕಾಫಿ ಡೇ ಎಂಟರ್ಪ್ರೈಸಸ್ ಅಂಗಸಂಸ್ಥೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ ಎಂದು ಸೆಬಿ ಆದೇಶದಲ್ಲಿ ತಿಳಿಸಿದೆ. ಜತೆಗೆ, ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ಗೆ (MACEL) ಮತ್ತು ಅದಕ್ಕೆ ಸಂಬಂಧಿತ ಸಂಸ್ಥೆಗಳಿಗೆ ನೀಡಿರುವ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಫಿ ಡೇ ಎಂಟರ್ಪ್ರೈಸಸ್ ಗೆ ಸೆಬಿ ಸೂಚಿಸಿದೆ. ಬಾಕಿ ಇರುವ ಮೊತ್ತದ ವಸೂಲಾತಿಗಾಗಿ ಕಂಪನಿಯು ಎನ್ ಎಸ್ ಇಯೊಂದಿಗೆ ಸಮಾಲೋಚಿಸಿ ಸ್ವತಂತ್ರ ಕಾನೂನು ಸಂಸ್ಥೆಯೊಂದನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ ಎಂದೂ ಸೆಬಿ ಹೇಳಿದೆ.