Home ಟಾಪ್ ಸುದ್ದಿಗಳು ಹೀರಾ ಗೋಲ್ಡ್ ಹಗರಣ: ಎರಡು ಆಸ್ತಿ ಹರಾಜಿಗೆ ಸುಪ್ರೀಂ ನಿರ್ದೇಶನ, 25 ಕೋಟಿ ರೂ. ಠೇವಣಿ...

ಹೀರಾ ಗೋಲ್ಡ್ ಹಗರಣ: ಎರಡು ಆಸ್ತಿ ಹರಾಜಿಗೆ ಸುಪ್ರೀಂ ನಿರ್ದೇಶನ, 25 ಕೋಟಿ ರೂ. ಠೇವಣಿ ಇಡುವಂತೆ ನೌಹೇರಾ ಶೇಖ್ ಗೆ ಸೂಚನೆ

ನವದೆಹಲಿ: ಹೀರಾ ಗೋಲ್ಡ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕಿ ನೌಹೇರಾ ಶೇಖ್ ವಂಚನೆಗೆ ಸಂಬಂಧಿಸಿದಂತೆ ವಿವಿಧ ಅರ್ಜಿಯಲ್ಲಿ ಶರಣಾಗಲು ಸುಪ್ರೀಂ ಕೋರ್ಟ್ 3 ತಿಂಗಳ ಅವಧಿಯನ್ನು ವಿಸ್ತರಿಸಿದೆ ಎಂದು Livelaw ವರದಿ ಮಾಡಿದೆ.


ಇದಲ್ಲದೆ, ಹೂಡಿಕೆದಾರರ ಹಣವನ್ನು ವಸೂಲಿ ಮಾಡಿದ ಹಣದಿಂದ ಮರುಪಾವತಿಸಲು 2 ಆಸ್ತಿಯನ್ನು ಹರಾಜು ಮಾಡಿ, 25 ಕೋಟಿ ಪಾವತಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಶೇಖ್ ಅವರಿಗೆ ಆದೇಶಿಸಿದೆ.


ಶೇಖ್ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್ ಐಆರ್ ಗಳು ಈಗ ಕಾನೂನಿನ ಪ್ರಕಾರ ಮುಂದುವರಿಯುತ್ತವೆ. ಪ್ರಸ್ತುತ ಆದೇಶವು ಪ್ರತಿವಾದಿ-ಆರೋಪಿಗಳು ಹೊಸದಾಗಿ ಜಾಮೀನಿಗೆ ಅರ್ಜಿ ಸಲ್ಲಿಸುವುದನ್ನು ತಡೆಯುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

Join Whatsapp
Exit mobile version