ವಲಸೆ ಕಾರ್ಮಿಕರ ಸೈಕಲ್ ಮಾರಿ 21 ಲಕ್ಷ ರೂ. ಆದಾಯ ಗಳಿಸಿದ ಉತ್ತರ ಪ್ರದೇಶ ಸರಕಾರ

Prasthutha|

ಲಖನೌ: ಕೊರೋನ ಲಾಕ್ ಡೌನ್ ಸಂಧರ್ಭದಲ್ಲಿ ಅದರಲ್ಲಿಯೂ 2020ರಲ್ಲಿ ಮೊದಲ ಅಲೆ ಶುರುವಾದಾಗ ಇಡೀ ದೇಶವೇ ಕಂಗೆಟ್ಟು ಹೋಗಿತ್ತು. ಈ ಸಂದರ್ಭದಲ್ಲಿ ಹಲವಾರು ವಲಸೆ ಕಾರ್ಮಿಕರು ತಮ್ಮ ಬಳಿ ಇರುವ ಸೈಕಲ್‌ ಕೊಂಡೊಯ್ಯಲು ಆಗದೇ ಅದನ್ನು ತಾವು ಇದ್ದ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದರು.

- Advertisement -

ಇಂತಹ ಸೈಕಲ್‌ ಅನ್ನು ಒಂದುಗೂಡಿಸಿರುವ ಉತ್ತರ ಪ್ರದೇಶ ಸರ್ಕಾರ, ಅದನ್ನು ಹರಾಜು ಮಾಡಿದ್ದು, 27 ಲಕ್ಷ ರೂಪಾಯಿ ಗಳಿಸಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು ಬಿಟ್ಟು ಹೋಗಿದ್ದ 5,400 ಬೈಸಿಕಲ್‌ಗಳನ್ನು ಸಹರಾನ್‌ಪುರ ಜಿಲ್ಲಾಡಳಿತವು 2 ವರ್ಷಗಳ ನಂತರ ಹರಾಜು ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5,400 ಬೈಸಿಕಲ್‌ಗಳನ್ನು ಹರಾಜು ಮಾಡಲಾಗಿದ್ದು ಇದರಿಂದ 21.2 ಲಕ್ಷ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಹರಿದು ಬಂದಿದೆ ಎಂದು ಸದರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಕಿನ್‌ಶುಕ್ ಶ್ರೀವಾಸ್ತವ ಹೇಳಿದ್ದಾರೆ.



Join Whatsapp