Home ಟಾಪ್ ಸುದ್ದಿಗಳು ಅಬ್ಬಬ್ಬಾ ಲಾಟ್ರಿ: 2 ಕೋಟಿ ರೂ. ಗೆದ್ದ ಹಮೇದಾ ಬೇಗಂ

ಅಬ್ಬಬ್ಬಾ ಲಾಟ್ರಿ: 2 ಕೋಟಿ ರೂ. ಗೆದ್ದ ಹಮೇದಾ ಬೇಗಂ

ಹೈದರಾಬಾದ್: ಹೈದರಾಬಾದ್ ಮೂಲದ ಹಮೇದಾ ಬೇಗಂ ಯುಎಇ ಯಲ್ಲಿ 2 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾರೆ.


ಯುಎಇ ಮೂಲದ ಮಹ್ಝೂಝ್ ಡ್ರಾ ಆಯೋಜಿಸಿದ್ದ ಲಾಟರಿಯಲ್ಲಿ ಹಮೇದಾ ಬೇಗಂ 2 ಕೋಟಿ ರೂಪಾಯಿ ಗೆದ್ದಿದ್ದಾರೆ.
ಲಾಟರಿಯ ಲಕ್ಕಿ ಡ್ರಾನಲ್ಲಿ ಅವರು 1 ಮಿಲಿಯನ್ ದಿರ್ಹಮ್ ಹಣ ಗಳಿಸಿದ್ದಾರೆ. ಅಂದರೆ 2, 22, 28,303 ರೂಪಾಯಿ ಗೆದ್ದಿದ್ದಾರೆ. ಏಪ್ರಿಲ್ 1 ರಂದು ನಡೆದ 122 ನೇ ಸಾಪ್ತಾಹಿಕ ಮಹ್ಝೂಜ್ ಡ್ರಾದಲ್ಲಿ ಆರು ವಿಜೇತ ಸಂಖ್ಯೆಗಳಲ್ಲಿ ಹಮೇದಾ ಬೇಗಂರ ಐದು ಸಂಖ್ಯೆ ಹೊಂದಿಕೆಯಾಯಿತು.


ಹಮೇದಾ ಬೇಗಂ ಅವರು ಕಳೆದ ಮೂರು ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯಲ್ಲಿ ನೆಲೆಸಿದ್ದಾರೆ. ವೈದ್ಯಕೀಯ ಕೋಡರ್ ಆಗಿ ಕೆಲಸ ಮಾಡುತ್ತಿದ್ದಾರೆ.

Join Whatsapp
Exit mobile version