Home ಟಾಪ್ ಸುದ್ದಿಗಳು ಐಪಿಎಸ್ ಅಧಿಕಾರಿಯೆಂದು ನಂಬಿಸಿ 2.5 ಕೋಟಿ ವಂಚನೆ: ಸಮವಸ್ತ್ರದಲ್ಲೇ ಠಾಣೆಗೆ ಹೋಗಿ ಬರುತ್ತಿದ್ದ ಖದೀಮ

ಐಪಿಎಸ್ ಅಧಿಕಾರಿಯೆಂದು ನಂಬಿಸಿ 2.5 ಕೋಟಿ ವಂಚನೆ: ಸಮವಸ್ತ್ರದಲ್ಲೇ ಠಾಣೆಗೆ ಹೋಗಿ ಬರುತ್ತಿದ್ದ ಖದೀಮ

ಬೆಂಗಳೂರು: ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ 2.5 ಕೋಟಿ ವಂಚನೆ ಮಾಡಿರುವ ವ್ಯಕ್ತಿಯ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಶ್ರೀನಿವಾಸ್ ಎಂಬಾತನೇ ಐಪಿಎಸ್ ಎಂದು ವಂಚಿಸಿದ ಆರೋಪಿ. ತಾನು ಪ್ರೊಬೆಷನರಿ ಎಸ್ ಪಿ ಎಂದು ಕೆಲ ಪೊಲೀಸ್ ಠಾಣೆಗಳಿಗೂ ಸಮವಸ್ತ್ರದಲ್ಲೇ ಆರೋಪಿ ಹೋಗಿರುವುದು ಪತ್ತೆಯಾಗಿದೆ.
ತಲಘಟ್ಟಪುರದ ವ್ಯಕ್ತಿಯೊಬ್ಬರಿಗೆ ಆರೋಪಿ ಪರಿಚಯವಾಗಿದ್ದಾನೆ. ಬಳಿಕ ತಾನು ಮೈಸೂರಿನಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿ, ಮೈಸೂರಿನ ಲ್ಯಾಂಡ್ ವ್ಯವಹಾರದಲ್ಲಿ 450 ಕೋಟಿ ವ್ಯವಹಾರ ಇದೆ ಅದು ಡೀಲ್ ಆದರೆ 250 ಕೋಟಿ ಸಿಗಲಿದೆ ಎಂದು ನಂಬಿಸಿ. ಸದ್ಯ ಒಂದಷ್ಟು ಹಣ ಬೇಕು ಎಂದು ಕೇಳಿದ್ದಾನೆ.


ನಂತರ ಹಂತ ಹಂತವಾಗಿ 2.5 ಕೋಟಿ ರೂ ಪಡೆದು ವಂಚನೆ ಮಾಡಿದ್ದಾನೆ. ಘಟನೆ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನಕಲಿ ಐಪಿಎಸ್ ಅಧಿಕಾರಿ ಶ್ರೀನಿವಾಸ್ ವಿರುದ್ದ ಕೇಸ್ ದಾಖಲಾಗಿದೆ.

Join Whatsapp
Exit mobile version