Home ಟಾಪ್ ಸುದ್ದಿಗಳು ‘ಸಮೀಕ್ಷೆ’ಗಾಗಿ ಚಿಲುಮೆಗೆ 18 ಲಕ್ಷ ರೂ. ನೀಡಿದ್ದ ಮಾಜಿ ಬಿಜೆಪಿ ಶಾಸಕ

‘ಸಮೀಕ್ಷೆ’ಗಾಗಿ ಚಿಲುಮೆಗೆ 18 ಲಕ್ಷ ರೂ. ನೀಡಿದ್ದ ಮಾಜಿ ಬಿಜೆಪಿ ಶಾಸಕ

ಬೆಂಗಳೂರು: ನಾಗರಿಕರಿಂದ ದತ್ತಾಂಶಗಳನ್ನು ಸಂಗ್ರಹಿಸುವ ಸಲುವಾಗಿ ಚುನಾವಣಾ ಅಧಿಕಾರಿಗಳಂತೆ ನಟಿಸಿದ ಆರೋಪ ಎದುರಿಸುತ್ತಿರುವ ಚಿಲುಮೆ ಟ್ರಸ್ಟ್ ಮತ್ತು ಅದರ ಅಂಗಸಂಸ್ಥೆಗೆ ಬಿಎಂಟಿಸಿ ಅಧ್ಯಕ್ಷ ಮತ್ತು ಮಾಜಿ ಬಿಜೆಪಿ ಶಾಸಕ ಎನ್.ಎಸ್.ನಂದೀಶ ರೆಡ್ಡಿ 18 ಲಕ್ಷ ರೂ ನೀಡಿರುವುದು ಬೆಳಕಿಗೆ ಬಂದಿದೆ.

ರೆಡ್ಡಿ ಚುನಾವಣಾ ಸಮೀಕ್ಷೆ ನಡೆಸಲು ಚಿಲುಮೆ ಟ್ರಸ್ಟ್ ಗೆ ಮುಂಗಡವಾಗಿ 17.5 ಲಕ್ಷ ರೂ. ಪಾವತಿಸಿರುವುದಾಗಿ  2018 ರ ವಿಧಾನಸಭಾ ಚುನಾವಣಾ ಅಫಿಡವಿತ್’ನಲ್ಲಿ ತೋರಿಸಿದ್ದಾರೆ.

2018 ರ ಅಫಿಡವಿತ್’ನಲ್ಲಿ, ಬಿಜೆಪಿ ನಾಯಕ ತನ್ನ ಪತ್ನಿ ಸೇರಿದಂತೆ 303 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿದ್ದರು. ರೆಡ್ಡಿ 2018 ರ ಚುನಾವಣೆಯಲ್ಲಿ ಕೆ.ಆರ್.ಪುರಂನಿಂದ ಸ್ಪರ್ಧಿಸಿದ್ದರು, ಅಲ್ಲಿ ಅವರು ಕಾಂಗ್ರೆಸ್’ನ ಬಿ.ಎ.ಬಸವರಾಜ (ಬೈರತಿ) ವಿರುದ್ಧ ಸೋತಿದ್ದರು.

ಚಿಲುಮೆ ಟ್ರಸ್ಟ್ ಗೆ ತಮ್ಮ ಆಜ್ಞೆಯ ಮೇರೆಗೆ ಮಾಡಿದ ಸಮೀಕ್ಷೆ ಕೆಲಸಕ್ಕಾಗಿ ಹಣವನ್ನು ಪಾವತಿಸಿದ್ದಾರೆ  ಎಂದು ರೆಡ್ಡಿ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಮೊದಲು ನಾನು ಮತದಾರರ ಪರಿಶೀಲನಾ ಸಮೀಕ್ಷೆಯನ್ನು ನಿಯೋಜಿಸಿದ್ದೆ. ಕೆ.ಆರ್. ಪುರಂನಲ್ಲಿ ಮತದಾರರ ಪಟ್ಟಿಯ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ನಾನು ಚುನಾವಣಾ ಆಯೋಗಕ್ಕೆ ದೂರು ಸಹ ನೀಡಿದ್ದೆ. ಆದರೆ, ದೂರು ದಾಖಲಿಸುವ ಮೊದಲು, ನಾನು ಸಮೀಕ್ಷೆಯನ್ನು ಮಾಡಲು ಬಯಸಿದ್ದೆ. ನಾನು ಸಮೀಕ್ಷೆಗೆ ಹಣ ಪಾವತಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

Join Whatsapp
Exit mobile version