Home ಟಾಪ್ ಸುದ್ದಿಗಳು ಬೇಡದ ಜಾಹೀರಾತಿಗೆ ವ್ಯಯಿಸಿದ ರೂ 163 ಕೋಟಿ ಹತ್ತು ದಿನದೊಳಗೆ ಹಿಂದಿರುಗಿಸಿ: ಕೇಜ್ರೀವಾಲ್’ಗೆ ತಾಕೀತು

ಬೇಡದ ಜಾಹೀರಾತಿಗೆ ವ್ಯಯಿಸಿದ ರೂ 163 ಕೋಟಿ ಹತ್ತು ದಿನದೊಳಗೆ ಹಿಂದಿರುಗಿಸಿ: ಕೇಜ್ರೀವಾಲ್’ಗೆ ತಾಕೀತು

ನವದೆಹಲಿ: ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ಜಾಹೀರಾತಿಗೆ ವ್ಯಯಿಸಿದ ರೂ. 163 ಕೋಟಿ ರೂಪಾಯಿಯನ್ನು ಇನ್ನು 10 ದಿನದೊಳಗೆ ಹಿಂದಿರುಗಿಸುವಂತೆ ದಿಲ್ಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರೀವಾಲ್’ರಿಗೆ ಡಿಐಪಿ- ಸುದ್ದಿ ಮತ್ತು ಪ್ರಚಾರ ನಿರ್ದೇಶನಾಲಯದ ದಿಲ್ಲಿ ಸರಕಾರದ ಪ್ರಚಾರ ವಿಭಾಗವು ತಾಕೀತು ಮಾಡಿದೆ.


ಇದರಲ್ಲಿ ರಾಜ್ಯದ ಹೊರಗಡೆ ನೀಡಿದ ಜಾಹೀರಾತುಗಳು ಮತ್ತು ಪ್ರತಿಪಕ್ಷಗಳನ್ನು ಗುರಿ ಮಾಡಿ ನೀಡಿದ ಜಾಹೀರಾತುಗಳ ಮೊತ್ತವೂ ಸೇರಿದೆ.
ದಿಲ್ಲಿ ಸರಕಾರವು 2016ರಲ್ಲಿ ನೀಡಿದ ಜಾಹೀರಾತುಗಳು ಅನುತ್ಪಾದಕ ಮತ್ತು ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿದ್ದವು ಎಂದು ಕಾಂಗ್ರೆಸ್ ನಾಯಕ ಮಾಕೆನ್ ಅವರು ಸುಪ್ರೀಂ ಕೋರ್ಟ್ ನೇಮಿಸಿದ್ದ ಮೂವರ ನೇತೃತ್ವದ ಸಿಸಿಆರ್’ಜಿಎ- ಸರಕಾರೀ ಜಾಹೀರಾತುಗಳಿಗೆ ವಿಷಯ ನಿಯಂತ್ರಣ ಸಮಿತಿಗೆ ದೂರು ನೀಡಿದ್ದರು.


ಆಮ್ ಆದ್ಮಿ ಪಕ್ಷವು ಇದನ್ನು ಬಳಸಿದ್ದು ಆ ವೆಚ್ಚವನ್ನೆಲ್ಲ ಹಿಂದಿರುಗಿಸುವಂತೆ ಈ ಸಮಿತಿಯು ದಿಲ್ಲಿ ಸರಕಾರಕ್ಕೆ ಸೂಚಿಸಿತ್ತು. ಎಎಪಿ ಒಂದು ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಡಿಐಪಿ ಒತ್ತಾಯದ ನೋಟೀಸಿನ ಕಾರಣ ಆ ಅರ್ಜಿ ಆಗಲೇ ವಜಾ ಆಗಿತ್ತು. ಎಎಪಿ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಹೋಯಿತಾದರೂ ಡಿಐಪಿ ಒತ್ತಾಯಾದೇಶದ ವಿರುದ್ಧ ತಡೆಯಾಜ್ಞೆ ಪಡೆಯಲು ವಿಫಲವಾಯಿತು.
ಒಟ್ಟು ಮೊತ್ತ ರೂ. 97,14,69,137 ರೂಪಾಯಿಯನ್ನು ಖಜಾನೆಗೆ ಹಿಂದಿರುಗಿಸಬೇಕಾಗಿದೆ.


2022-23ರಲ್ಲಿ ಮರು ಅಂದಾಜು ಮಾಡಿದ ಪ್ರಕಾರ ಈ ಮೊತ್ತವು ರೂ. 106,42,26,121 ಎಂದರೆ 106 ಕೋಟಿ ರೂಪಾಯಿ ಮೀರಿರುವುದಾಗಿ ಸುದ್ದಿ ಮತ್ತು ಪ್ರಚಾರ ಇಲಾಖೆಯ ಕಾರ್ಯದರ್ಶಿ ಆರ್. ಅಲೈಸ್ ವಾಜ್ ಅವರು ಕೇಜ್ರಿವಾಲ್’ಗೆ ನೆನಪೋಲೆ ಬರೆದಿದ್ದಾರೆ.


ಮೊತ್ತವನ್ನು ರಾಜ್ಯ ಖಜಾನೆಗೆ ತುಂಬಿಸಬೇಕು. ರೂ. 99.31 ಕೋಟಿ ಮತ್ತು ದಂಡ ಸಹಿತದ ಬಡ್ಡಿ ರೂ. 64.30 ಕೋಟಿ ಭರಿಸಬೇಕು ಎಂದು ವಾಜ್ ಅವರ ಪತ್ರದಲ್ಲಿದೆ. ಅಲ್ಲದೆ ಇತರ ಜಾಹೀರಾತು ಏಜೆನ್ಸಿಗಳಿಗೆ ಎಎಪಿ ರೂ. 7.11 ಕೋಟಿ ಭರಿಸಬೇಕು ಎಂದೂ ವಾಜ್ ಅವರ ಪತ್ರ ಹೇಳಿದೆ.
“ಈಗ ನೋಟಿಸ್ ನೀಡಿದ 10 ದಿನಗಳ ಒಳಗೆ ಹಣ ಹಿಂದಿರುಗಿಸುವಂತೆ ಅಂತಿಮ ಪತ್ರ ಎಂದು ರವಾನಿಸಲಾಗಿದೆ. ಇದಕ್ಕೆ ತಪ್ಪಿದಲ್ಲಿ ಕಾನೂನು ರೀತ್ಯಾ ಮುಂದಿನ ಕ್ರಮ ತೆಗೆದುಕೊಳ್ಳುಲಾಗುವುದು” ಎಂದು ನೋಟಿಸ್’ನಲ್ಲಿ ಹೇಳಲಾಗಿದೆ.
ಸರಕಾರವು ಜಾಹೀರಾತಿಗೆ ಹಣ ದುರುಪಯೋಗ ಮಾಡಿದೆ ಎಂದು ಸಿಸಿಆರ್’ಜಿಎ ಆದೇಶ ನೀಡಿರುವುದರಿಂದ ಕೂಡಲೆ ರಾಜ್ಯ ಸರಕಾರವು ರೂ. 97 ಕೋಟಿ ರೂಪಾಯಿ ಹಿಂದಿರುಗಿಸುವಂತೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಡಿಸೆಂಬರ್ 21ರಂದು ನಿರ್ದೇಶಿಸಿದ್ದರು.

Join Whatsapp
Exit mobile version