Home ಟಾಪ್ ಸುದ್ದಿಗಳು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್​, ರೆವಿನ್ಯೂ ಇನ್ಸ್​ಪೆಕ್ಟರ್

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್​, ರೆವಿನ್ಯೂ ಇನ್ಸ್​ಪೆಕ್ಟರ್

ಕಲಬುರಗಿ: 12,000 ರೂ. ಲಂಚ ಸ್ವೀಕರಿಸುವಾಗ ತಹಶೀಲ್ದಾರ್​ ಮತ್ತು ರೆವಿನ್ಯೂ ಇನ್ಸ್​ಪೆಕ್ಟರ್​ ರೆಡ್​ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕು ಕಚೇರಿಯಲ್ಲೇ ನಡೆದಿದೆ.

ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಆರ್​ಐ ರಾಜಶೇಖರ್​ ಬಲೆಗೆ ಬಿದ್ದಿರುವ ಅಧಿಕಾರಿಗಳು. ಜಮೀನಿಗೆ ಕೃಷಿಯೇತರ ಪ್ರಮಾಣಪತ್ರ ನೀಡಲು ಮೆಹಬೂಬ್ ಪಟೇಲ್​​ ಎನ್ನುವವರಿಂದ 12,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಹೆಬೂಬ್ ಪಟೇಲ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದು, ಲಂಚ ಪಡೆಯುವಾಗ ಬಂಧಿಸಿದ್ದಾರೆ.

ಕಂದಾಯ ಇಲಾಖೆಯ ಸರ್ವೇಯರ್ ಲೋಕಾಯುಕ್ತ ಬಲೆಗೆ

ಚಿಕ್ಕಮಗಳೂರಿನ ಕಂದಾಯ ಇಲಾಖೆಯ ಭೂಮಾಪಕ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ನಡೆದಿದೆ. ರಮೇಶಪ್ಪ ಬಲೆಗೆ ಬಿದ್ದ ಭೂಮಾಪಕ. ಜಮೀನಿನ ಸರ್ವೆಗಾಗಿ ರೈತ ಹೊನ್ನಪ್ಪ ಎನ್ನುವವರಿಂದ ₹1 ಲಕ್ಷ ರೂ. ಲಂಚ ಕೇಳಿದ್ದು, ಮುಂಗಡವಾಗಿ 3,000 ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.

ಉಡುಪಿಯಲ್ಲಿ ಸಹ ಲಂಚ ಪಡೆಯುವಾಗ ನಾಡಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರುನಲ್ಲಿ ನಡೆದಿದೆ. ನಿಜಾಮುದ್ದಿನ್ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿ. ಸಂತತಿ ನಕ್ಷೆ ಸಿದ್ದಪಡಿಸಲು ನಿನ್ನೆ ನಾಲ್ಕು ಸಾವಿರ ರೂ. ಪಡೆದಿದ್ದು, ಇಂದು ಬಾಕಿ 1 ಸಾವಿರ ರೂ. ಲಂಚ ಪಡೆಯುವಾಗ ಲೋಕಯುಕ್ತ ದಾಳಿ ಮಾಡಿದ್ದಾರೆ.

ಸದ್ಯ ನಾಡ ಕಚೇರಿ ಸಿಬ್ಬಂದಿ ನಿಜಾಮುದ್ದಿನ್ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದ‌ ಎಂದು ಮಾಹಿತಿ ಸಿಕ್ಕಿದೆ ಲೋಕಯುಕ್ತ ಡಿವೈಎಸ್ಪಿ ಕೆಸಿ ಪ್ರಕಾಶ್, ಇನ್ಸ್ಪೆಕ್ಟರ್ ರಫೀಕ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

Join Whatsapp
Exit mobile version