Home ಟಾಪ್ ಸುದ್ದಿಗಳು ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು: ರೈಲ್ವೆ ಇಲಾಖೆ

ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು: ರೈಲ್ವೆ ಇಲಾಖೆ

ನವದೆಹಲಿ: ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು ರೈಲ್ವೆ ಇಲಾಖೆ 1200 ಕೋಟಿ ರೂ. ಖರ್ಚು ಮಾಡುತ್ತದೆ ಎಂದು ವರದಿಯಾಗಿದೆ.

ರೈಲ್ವೆ ಪ್ಲಾಟ್‌ ಫಾರ್ಮ್​​ ಗಳಲ್ಲಿ ಹಾಗೂ ರೈಲಿನ ಒಳಗೆ ಕೂತು ಕೆಲವರು ಉಗುಳುತ್ತಾರೆ. ಇಂತಹ ಕಲೆಗಳನ್ನು ತೆಗೆಯಲು ರೈಲ್ವೆ ಮೂಲಗಳ ಪ್ರಕಾರ, ಪ್ರತಿ ವರ್ಷ ಗ್ಯಾಲನ್ ಮತ್ತು ಗುಟ್ಕಾ ಕಲೆಗಳನ್ನು ಸ್ವಚ್ಛಗೊಳಿಸಲು 1200 ಕೋಟಿ ರೂ. ಖರ್ಚು ಮಾಡಲಾಗುತ್ತದೆ.

ಇಂತಹ ಅಜ್ಞಾನಿ ಜನರಿಂದ ರೈಲ್ವೆ ಇಲಾಖೆಗೆ 1200 ಕೋಟಿ ರೂ. ಹೊರೆ ಬೀಳುತ್ತಾದೆ. ರೈಲು ನಿಲ್ದಾಣವಾಗಲಿ, ರೈಲಿನಾಗಲಿ ಗುಟ್ಕಾ-ಪಾನ್ ಕಲೆಗಳು ರೈಲಿನ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಪರಿಸರವನ್ನು ಕೊಳಕು ಮಾಡುತ್ತವೆ. ಇದನ್ನು ನಿರ್ವಹಿಸಲು, ರೈಲ್ವೆ ಇಲಾಖೆ ಈ ಬಗ್ಗೆ ಹೆಚ್ಚು ಗಮನ ನೀಡುತ್ತದೆ ಹಾಗೂ ಅದಕ್ಕಾಗಿ ರೈಲ್ವೇ ಅಪಾರ ಪ್ರಮಾಣದ ಹಣವನ್ನು ವ್ಯಯಿಸುತ್ತದೆ.

Join Whatsapp
Exit mobile version