Home ಟಾಪ್ ಸುದ್ದಿಗಳು SDPI ಮುಖಂಡ ಅನ್ವರ್ ಸಾದತ್ ಪುತ್ರನ ಬಗ್ಗೆ ಅವಹೇಳನಕಾರಿ ಸುದ್ದಿ: ‘ಜಯಕಿರಣ’ ಪತ್ರಿಕೆ ವಿರುದ್ಧ 1...

SDPI ಮುಖಂಡ ಅನ್ವರ್ ಸಾದತ್ ಪುತ್ರನ ಬಗ್ಗೆ ಅವಹೇಳನಕಾರಿ ಸುದ್ದಿ: ‘ಜಯಕಿರಣ’ ಪತ್ರಿಕೆ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

ಮಂಗಳೂರು: ಉತ್ತರ ಪೊಲೀಸ್ ಠಾಣೆ ಪ್ರಕರಣವೊಂದರ ಕುರಿತಾಗಿ ಎಸ್.ಡಿ.ಪಿ.ಐ ಮುಖಂಡ ಅನ್ವರ್ ಸಾದತ್ ರವರ ಪುತ್ರ ಅಬ್ದುಲ್ಲಾ ಹನ್ನಾನ್ ರ ಭಾವಚಿತ್ರದೊಂದಿಗೆ “ಡ್ರಗ್ಸ್ ಗ್ಯಾಂಗಿನಿಂದ ಕೃತ್ಯ” ಎನ್ನುವ ತಲೆ ಬರಹದಡಿಯಲ್ಲಿ ಸುಳ್ಳು ಮತ್ತು ಅವಹೇಳನಕಾರಿ ಸುದ್ದಿ ಪ್ರಕಟಿಸಿದ ಜಯಕಿರಣ ಪತ್ರಿಕೆಯ ಮಾಲಕರು ಮತ್ತು ಸಂಪಾದಕರ ವಿರುದ್ದ ಅನ್ವರ್ ಸಾದತ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸುಮಾರು ಒಂದು ಕೋಟಿ‌ ರೂಪಾಯಿ ಮಾನಹಾನಿ ದಾವೆ ಯನ್ನು ಹೂಡಿದ್ದು, ಪ್ರತಿವಾದಿಗಳಿಗೆ ಮಂಗಳೂರಿನ ಹಿರಿಯ 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಸಮನ್ಸ್ ಹೊರಡಿಸಿದೆ.

ಮಾತ್ರವಲ್ಲದೆ ಪ್ರತಿವಾದಿಗಳಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ಆದೇಶಿಸಿದೆ.

ಅನ್ವರ್ ಸಾದತ್ ಪರ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ಇದರ ನ್ಯಾಯವಾದಿಗಳಾದ ಆಸಿಫ್ ಬೈಕಾಡಿ, ಇಸ್ಮಾಯಿಲ್ ಶಾಫಿ ಬೈಕಂಪಾಡಿ ,ಮುಫೀದ ಮುಡಿಪು ದಾವೆ ಹೂಡಿದ್ದಾರೆ.

Join Whatsapp
Exit mobile version