Home ಟಾಪ್ ಸುದ್ದಿಗಳು ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ RPI, KDSS ಸರ್ಕಾರಕ್ಕೆ ಮನವಿ

ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ RPI, KDSS ಸರ್ಕಾರಕ್ಕೆ ಮನವಿ

ಉಡುಪಿ: ಕುಮಾರಿ ಸೌಜನ್ಯಳ ಹತ್ಯೆ ಪ್ರಕರಣವನ್ನು ಸರಕಾರ ಮರುತನಿಖೆ ನಡೆಸಿ ನೈಜ್ಯ ಆರೋಪಿತರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಸೌಜನ್ಯ ಕುಟುಂಬಕ್ಕೆ ನ್ಯಾಯದೊಂದಿಗೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಒಂದು ಸರಕಾರಿ ನೌಕರಿ ನೀಡಬೇಕು ಮತ್ತು ನಿರಪರಾಧಿ ಸಂತೋಷ್ ರಾವ್ ಕುಟುಂಬಕ್ಕೂ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ RPI Karnataka ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಮನವಿ ಸಲ್ಲಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಕಳೆದ 11 ವರ್ಷಗಳ ಹಿಂದೆ ಕುಮಾರಿ ಸೌಜನ್ಯಳನ್ನು ಅತ್ಯಂತ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಬಗ್ಗೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದ್ದು, ಸುದೀರ್ಘ ಸಮಯದ ಬಳಿಕ ಸಿಬಿಐ ವಿಶೇಷ ನ್ಯಾಯಾಲಯ ಸೌಜನ್ಯ ಪ್ರಕರಣ ಸಾಕ್ಷಾಧಾರಗಳು ಇಲ್ಲದ ಕಾರಣ ನೈಜ್ಯ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಹಾಗೂ ನಿರಪರಾಧಿ ಸಂತೋಷ್ ರಾವ್ ಕಳೆದ 11 ವರ್ಷಗಳಿಂದ ಜೈಲು ಶಿಕ್ಷೆಗೆ ಒಳಪಡಿಸಿ ಸೌಜನ್ಯ ಹಾಗೂ ಸಂತೋಷ್ ರಾವ್ ಕುಟುಂಬ ಕಳೆದ 11 ವರ್ಷಗಳಿಂದಲೂ ಅತ್ಯಂತ ನೋವಿನಿಂದ, ಹಿಂಸೆಯಿಂದ ಕಳೆದಿದೆ. ಕೊನೆಗೂ ಈ ಎರಡೂ ಕುಟುಂಬಗಳು ನ್ಯಾಯ ವಂಚಿತರಾಗಿದ್ದಾರೆ.

ಆದ್ದರಿಂದ ಮಾನ್ಯ ಸಿದ್ಧರಾಮಯ್ಯ ಸರಕಾರ ಈ ಪ್ರಕರಣವನ್ನು ಮರು ತನಿಖೆಗೆ ಆದೇಶ ಮಾಡಬೇಕು ಮತ್ತು ನೊಂದ ಸೌಜನ್ಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರದ ಜೊತೆಗೆ ಅವರ ಕುಟುಂಬಕ್ಕೆ ಒಂದು ಸರಕಾರಿ ನೌಕರಿಯನ್ನು ನೀಡಬೇಕು. ಹಾಗೂ 11 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಅಮಾಯಕ ಸಂತೋಷ್ ರಾವ್ ಕುಟುಂಬಕ್ಕೂ ಸೂಕ್ತ ಪರಿಹಾರ ನೀಡಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಈ ಮನವಿಯ ಮೂಲಕ ಮಾನ್ಯ ಸರ್ಕಾರವನ್ನು ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಸಂಘಟನೆಯ ಮತ್ತು ಪಕ್ಷದ ಪ್ರಮುಖರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶೇಖರ್ ಹಾವಂಜೆ, ಸದಾಶಿವ ಶೆಟ್ಟಿ ಹೇರೂರು, ಸಂಜೀವ ಕುಕ್ಕೆಹಳ್ಳಿ, ವಿಜಯ್ ಬಾರ್ಕೂರು,ಅನಿಲ್ ಫೆರ್ನಾಂಡಿಸ್, ಅಕ್ಬರ್ ಬಾಷಾ, ರಮೇಶ್ ಮಾಬಿಯಾನ್, ಪ್ರಭಾಕರ್ ಅಮ್ಮುಂಜೆ, ಪೃಥ್ವಿ ಒಳಗುಡ್ಡೆ, ಸುಜಾತ ಹಾವಂಜೆ, ಪೂರ್ಣಿಮಾ ಬೈರಂಪಳ್ಳಿ, ಸೀನ ಬೈರಂಪಳ್ಳಿ, ನಾಥು ಒಳಗುಡ್ಡೆ , ಮಹಾಬಲ ಒಳಗುಡ್ಡೆ, ಬೇಬಿ, ಕರ್ಣ, ವಿಜಯ್ ಅಮ್ಮುಂಜೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Join Whatsapp
Exit mobile version