ಧರ್ಮಶಾಲಾ: ವಿರಾಟ್ ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಂಘಟಿತ ಹೋರಾಟದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 17ನೇ ಆವೃತ್ತಿಯ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಆರ್ ಸಿಬಿ 7 ವಿಕೆಟಿಗೆ 241 ರನ್ ಪೇರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಪಂಜಾಬ್ 17 ಓವರ್ ಗಳಲ್ಲಿ 181 ರನ್ ಗಳಿಗೆ ಆಲೌಟಾಯಿತು. ಇದು ಅರ್ ಸಿಬಿ 12 ನೇ ಪಂದ್ಯದಲ್ಲಿ ಸಾಧಿಸಿದ 5 ನೇ ಜಯವಾಗಿದೆ. ಪಂಜಾಬ್ 12 ನೇ ಪಂದ್ಯದಲ್ಲಿ 8 ನೇ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ಫಾಫ್ ಡು ಪ್ಲೆಸಿಸ್ ಮತ್ತೊಂದು ಬಾರಿ ಕಳಪೆ ಪ್ರದರ್ಶನ ನೀಡಿದರು. 9 ರನ್ಗೆ ಅವರು ಔಟಾದರು. ಹೀಗಾಗಿ 19 ರನ್ಗೆ ಒಂದು ವಿಕೆಟ್ ಕಳೆದುಕೊಂಡ ಆರ್ಸಿಬಿಗೆ ಸಂಕಷ್ಟ ಶುರುವಾಯಿತು. ಬಳಿಕ ಬಂದ ವಿಲ್ ಜ್ಯಾಕ್ಸ್ ಕೂಡ 12 ರನ್ಗೆ ಸೀಮಿತಗೊಂಡರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಇವರಿಗೆ ಜತೆಯಾದ ರಜತ್ ಪಾಟೀದರ್ ಕೂಡ ಭರ್ಜರಿ ಆಟ ಆಡಿದರು. ಅವರು 23 ಎಸೆತಕ್ಕೆ 55 ರನ್ ಬಾರಿಸಿದ್ದ ಕಾರಣ ಆರ್ಸಿಬಿಯ ರನ್ ಗಳಿಕೆ ಏರುಗತಿಯಲ್ಲಿ ಸಾಗಿತು.
ವಿರಾಟ್ ಕೊಹ್ಲಿ ಜತೆ ಮತ್ತೊಂದು ಉತ್ತಮ ಜತೆಯಾಟ ನೀಡಿದ ವಿಲ್ ಜ್ಯಾಕ್ಸ್ 46 ರನ್ ಬಾರಿಸಿದರು. ಕೊಹ್ಲಿ 6 ಫೋರ್ ಹಾಗೂ 4 ಸಿಕ್ಸರ್ ಸಮೇತ ಭರ್ಜರಿ ಆಟವಾಡಿ ಶತಕದ ಹಾದಿಯಲ್ಲಿದ್ದರು. ಆದರೆ, ಕೊನೇ ಹಂತದಲ್ಲಿ ರನ್ ಬಾಚುವ ಒತ್ತಡಕ್ಕೆ ಬಿದ್ದ ಅವರು 8 ರನ್ಗಳಿಂದ ಶತಕ ವಂಚಿತರಾದರು.
ಆರ್ಸಿಬಿ ಪರ ಮೊಹಮ್ಮಸ್ ಸಿರಾಜ್ 3 ವಿಕೆಟ್, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.