Home ಕ್ರೀಡೆ 2025ರ ಚಾಂಪಿಯನ್ ಟ್ರೋಫಿ ಹಾಗೂ WTC ಟೂರ್ನಿಗೆ ರೋಹಿತ್ ಶರ್ಮಾ ನಾಯಕ

2025ರ ಚಾಂಪಿಯನ್ ಟ್ರೋಫಿ ಹಾಗೂ WTC ಟೂರ್ನಿಗೆ ರೋಹಿತ್ ಶರ್ಮಾ ನಾಯಕ

ನವದೆಹಲಿ: 2023-25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಮತ್ತು 2025 ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾದ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಖಚಿತಪಡಿಸಿದ್ದಾರೆ.

ಇಂದು ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ಶಾ, ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ನಾವು ಡಬ್ಲ್ಯುಟಿಸಿ ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್‌ಎ) ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯದಲ್ಲಿ ಇತ್ತೀಚೆಗೆ ನಡೆದ ಟಿ 20 ವಿಶ್ವಕಪ್ 2024 ಅನ್ನು ಗೆಲ್ಲುವ ಮೂಲಕ 37 ವರ್ಷದ ಶರ್ಮಾ ನಾಯಕನಾಗಿ ತಮ್ಮ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ರೋಫಿಯನ್ನು ಗೆದ್ದಿದ್ದು, ಅವರ ಮೇಲೆ ವಿಸ್ವಾಸ ಮೂಡಿಸಿದೆ.

Join Whatsapp
Exit mobile version