ಬೆಂಗಳೂರು: ಶಿಕ್ಷಣ ಇಲಾಖೆಯಿಂದ ರಾಷ್ಟ್ರಕವಿ ಕುವೆಂಪುಗೆ ಅವಮಾನ ಮಾಡಲಾಗಿದ್ದು, ಕುವೆಂಪು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತಿ ಆಗಿದ್ದಾರೆ ಎಂದು ಪಠ್ಯ ಮುದ್ರಿಸಲಾಗಿದೆ. ಈ ಮೂಲಕ ರಾಷ್ಟ್ರ ಕವಿ, ನಾಡಗೀತೆ ಬರೆದ ಕುವೆಂಪುರವರನ್ನು ಅವಮಾನಿಸಲಾಗಿದೆ.
ಕವಿ ಕುವೆಂಪು ಕಥೆ, ಕವನ ಬರೆಯುವ, ಪುಸ್ತಕ ಓದುವ ಅಭ್ಯಾಸವಿತ್ತು ಎಂದು ಹೇಳುವ ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಅದರ ಜೊತೆಗೆ, ಕುವೆಂಪು ಅನೇಕರ ಪ್ರೋತ್ಸಾಹದಿಂದ ಮುಂದೆ ಬಂದು ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ತಿಳಿಸಲಾಗಿದೆ.
ರಾಷ್ಟ್ರಕವಿ ಕುವೆಂಪುಗೆ ಅವಮಾನ ಮಾಡಿದ ವಿರುದ್ಧ ಕನ್ನಡಿಗರು ಸೇರಿದಂತೆ ಅನೇಕ ವಿಚಾರವಾದಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಾರಿ ಶಿಕ್ಷಣ ಇಲಾಖೆ ಕೆಲವರ ಪಾಠವನ್ನು ಪಠ್ಯದಿಂದ ತೆಗೆದು ಹೊಸ ಪಾಠವನ್ನು ಸೇರಿಸಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪಠ್ಯ ಪರಿಷ್ಕರಣೆ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಿದೆ.