ಲಂಡನ್: ಮ್ಯಾನ್ಮಾರ್ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದ್ವೇಷ ಹರಡಿದ ಫೇಸ್‌ಬುಕ್ ವಿರುದ್ಧ ರೋಹಿಂಗ್ಯಾ ಮುಸ್ಲಿಮರು ಮೊಕದ್ದಮೆ ಹೂಡಿದ್ದಾರೆ.
ಅಮೆರಿಕ ಮತ್ತು ಬ್ರಿಟನ್ ನಲ್ಲಿರುವ ರೋಹಿಂಗ್ಯಾ ನಿರಾಶ್ರಿತರು ಫೇಸ್‌ಬುಕ್ ವಿರುದ್ಧ 150 ಬಿಲಿಯನ್ ಪೌಂಡ್ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ.
ಮ್ಯಾನ್ಮಾರ್ ನ ಅಲ್ಪಸಂಖ್ಯಾತರಾದ ರೋಹಿಂಗ್ಯಾಗಳ ವಿರುದ್ಧ ದ್ವೇಷದ ಪೋಸ್ಟ್’ಗಳನ್ನು ಸಾಮಾಜಿಕ ಮಾಧ್ಯಮ ಮೂಲಕ ಹರಡಲು ಫೇಸ್‌ಬುಕ್ ಅವಕಾಶ ನೀಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರೋಹಿಂಗ್ಯಾ ನಿರಾಶ್ರಿತರನ್ನು ಪ್ರತಿನಿಧಿಸುವ ಬ್ರಿಟಿಷ್ ಕಾನೂನು ಸಂಸ್ಥೆಯು ಈ ಕುರಿತು ಫೇಸ್‌ಬುಕ್ ಗೆ ಪತ್ರ ಬರೆದಿದೆ. ಆದರೆ ಈ ಬಗ್ಗೆ ಫೇಸ್‌ಬುಕ್ ಇನ್ನೂ ಪ್ರತಿಕ್ರಿಯಿಸಿಲ್ಲ.
2017ರಲ್ಲಿ ಬೌದ್ಧರು ಬಹುಸಂಖ್ಯಾತರಾಗಿರುವ ಮ್ಯಾನ್ಮಾರ್ ಸೇನೆ ನಡೆಸಿದ ದಾಳಿಯಲ್ಲಿ 10,000ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಸಾವನ್ನಪ್ಪಿದ್ದರು.