Home ಟಾಪ್ ಸುದ್ದಿಗಳು ಅಮೇಥಿ: ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗದಿದ್ದರೂ ಎಲ್ಲೆಲ್ಲೂ ರಾಬರ್ಟ್ ವಾದ್ರಾ ಪೋಸ್ಟರ್

ಅಮೇಥಿ: ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗದಿದ್ದರೂ ಎಲ್ಲೆಲ್ಲೂ ರಾಬರ್ಟ್ ವಾದ್ರಾ ಪೋಸ್ಟರ್

ಅಮೇಥಿಯಲ್ಲಿ ಮೇ 20ರಂದು ಮತದಾನ ನಡೆಯಲಿದ್ದು, ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡದೆ ಕುತೂಹಲ ಮುಂದುವರೆಸಿದೆ.


ಆದರೆ ಈಗಾಗಲೇ ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರ ಪೋಸ್ಟರ್ ಎಲ್ಲೆಡೆ ರಾರಾಜಿಸುತ್ತಿವೆ. ಅದರಲ್ಲಿ ಈ ಬಾರಿ ರಾಬರ್ಟ್ ವಾದ್ರಾ ಎನ್ನುವ ಅರ್ಥವನ್ನು ಕೊಡುವ ವಾಖ್ಯವನ್ನು ಬರೆಯಲಾಗಿದೆ.


ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನದಲ್ಲಿ ಮೇ 20 ರಂದು ಅಮೇಥಿ ಮತದಾನ ನಡೆಯಲಿದ್ದು, ಮೇ 3 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಬಿಜೆಪಿ ಹಾಲಿ ಸಂಸದೆ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದ್ದರೂ, ಕಾಂಗ್ರೆಸ್ ತನ್ನ ಆಯ್ಕೆಯನ್ನು ಇನ್ನೂ ಹೆಸರಿಸಿಲ್ಲ.

Join Whatsapp
Exit mobile version