ನವದೆಹಲಿ: ಭೂ ಅವ್ಯವಹಾರದ ಆರೋಪಕ್ಕೆ ಸಂಧಿಸಿದಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪತಿ, ಉದ್ಯಮಿ ರಾಬರ್ಟ್ ವಾದ್ರಾಗೆ ಜಾರಿ ನಿರ್ದೇಶನಾಲಯ ಈಗಾಗಲೇ ಸಮನ್ಸ್ ಕಳುಹಿಸಿದ್ದು, ಇಂದು ಇಡಿ ಕಚೇರಿಗೆ ವಾದ್ರಾ ಹಾಜರಾಗಿದ್ದಾರೆ.
ಇದು ರಾಬರ್ಟ್ ವಾದ್ರಾಗೆ ಕಳುಹಿಸಲಾದ ಎರಡನೇ ಸಮನ್ಸ್ ಆಗಿದ್ದು, ಹರ್ಯಾಣ ಭೂ ವ್ಯವಹಾರ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ಅವರನ್ನು ಇಂದು ವಿಚಾರಣೆಗೆ ಒಳಪಡಿಸಲಾಗಿದೆ. ರಾಬರ್ಟ್ ವಾದ್ರಾ ಇಂದು ಇಡಿ ಕಚೇರಿಗೆ ತೆರಳಿದ್ದಾರೆ. ಇದು 2018 ರ ಪ್ರಕರಣವಾಗಿದ್ದು. ಗುರುಗ್ರಾಮದಲ್ಲಿ ಸ್ಕೈಲೈಟ್ ಹಾಸ್ಪಿಟಾಲಿಟಿ ಮತ್ತು ಡಿಎಲ್ಎ ಫ್ ನಡುವೆ 3.5 ಎಕರೆ ಭೂಮಿ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಇದರಲ್ಲಿ ವಂಚನೆ ಮತ್ತು ನಿಯಮಗಳ ಉಲ್ಲಂಘನೆಯ ಆರೋಪಗಳು ಸೇರಿವೆ, ಏಪ್ರಿಲ್ 8 ರಂದು ರಾಬರ್ಟ್ ವಾದ್ರಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು, ಆದರೆ ಅವರು ಹಾಜರಾಗಲಿಲ್ಲ. ಇಡಿ ಈಗ ಎರಡನೇ ಸಮನ್ಸ್ ಕಳುಹಿಸಿತ್ತು. ಸುರೇಂದ್ರ ಶರ್ಮಾ ಅವರ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 1, 2018 ರಂದು ಗುರುಗ್ರಾಮದ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಬರ್ಟ್ ವಾದ್ರಾ ಅವರ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿ ಇತರರೊಂದಿಗೆ ಸೇರಿ ವಂಚನೆ ಮಾಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಹೂಡಾ ಅವರನ್ನು ಸಹ ಆರೋಪಿಯನ್ನಾಗಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 420, 120, 467, 468 ಮತ್ತು 471 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ನಂತರ, ಐಪಿಸಿಯ ಸೆಕ್ಷನ್ 423 ರ ಅಡಿಯಲ್ಲಿ ಹೊಸ ಆರೋಪಗಳನ್ನು ಸೇರಿಸಲಾಯಿತು.