Home ಟಾಪ್ ಸುದ್ದಿಗಳು ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು

ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ : ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಯಾದವ್ ಅವರನ್ನು ಶುಕ್ರವಾರ ದಿಲ್ಲಿಯ ಏಮ್ಸ್ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ.

ಮೇವು ಹಗರಣಕ್ಕೆ ಸಂಬಂಧಿಸಿದ ದುಮ್ಕಾ ಖಜಾನೆ ಪ್ರಕರಣದ ಆರೋಪಿಯಾಗಿರುವ ಹಿರಿಯ ರಾಜಕಾರಣಿ ಲಾಲು ಪ್ರಸಾದ್ ಜ್ವರ ಹಾಗೂ ದಣಿವಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಅವರ ಸ್ಥಿತಿ ಗಂಭೀರವಾಗಿಲ್ಲದಿದ್ದರೂ ರಕ್ತದ ವರದಿಗಾಗಿ ಕಾಯಲಾಗುತ್ತಿದೆ.

ಲಾಲು ಪ್ರಸಾದ್ ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಮತ್ತು ವಾಡಿಕೆಯ ಆರೋಗ್ಯ ತಪಾಸಣೆಗಾಗಿ ಈ ವರ್ಷದ ಆರಂಭದಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ (ಏಮ್ಸ್)ಭೇಟಿ ನೀಡಿದ್ದರು.

Join Whatsapp
Exit mobile version