ಶ್ರೀಲಂಕಾ ವಿರುದ್ಧದ ಗೆಲುವನ್ನು ಗಾಝಾ ಜನತೆಗೆ ಅರ್ಪಿಸಿದ ರಿಝ್ವಾನ್

Prasthutha|

ಹೈದರಾಬಾದ್: ಮಂಗಳವಾರ ನಡೆದ ವಿಶ್ವಕಪ್ ನ 8ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ದಾಖಲೆಯ 6 ವಿಕೆಟ್ ಗೆಲುವು ಸಾಧಿಸಿತು. ಈ ಗೆಲುವನ್ನು ಶತಕ ವೀರ ಮೊಹಮ್ಮದ್ ರಿಝ್ವಾನ್ ಅವರು ಇಸ್ರೇಲ್ ದಾಳಿಗೊಳಗಾಗಿರುವ ಗಾಜಾದ ಜನರಿಗೆ ಅರ್ಪಿಸಿದ್ದಾರೆ. ಈ ಮೂಲಕ ಇಸ್ರೇಲ್ ದಾಳಿಯಿಂದ ನಲುಗಿರುವ ಅಲ್ಲಿನ ಜನತೆಗೆ ಬೆಂಬಲವಾಗಿ ನಿಂತಿದ್ದಾರೆ.

- Advertisement -

ಗೆಲುವಿನ ಬಳಿಕ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ರಿಜ್ವಾನ್, ‘ಈ ಗೆಲುವು ಗಾಝಾದಲ್ಲಿ ಕಷ್ಟದಲ್ಲಿರುವ ನಮ್ಮ ಸಹೋದರ ಸಹೋದರಿಯರಿಗೆ ಅರ್ಪಣೆ. ಗೆಲುವಿನಲ್ಲಿ ಕೊಡುಗೆ ನೀಡಿದ್ದು ಸಂತೋಷ ತಂದಿದೆ. ಇಡೀ ತಂಡದ ಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ಚೊಚ್ಚಲ ಪಂದ್ಯ ಆಡಿದ ಅಬ್ದುಲ್ಲಾ ಶಫೀಕ್ ಅವರಿಗೆ ಹೆಚ್ಚಿನ ಶ್ರೇಯ ಸಲ್ಲಬೇಕು. ಅದ್ಭುತ ಆತಿಥ್ಯ ಮತ್ತು ಬೆಂಬಲ ನೀಡಿದ ಹೈದರಾಬಾದ್ ಜನರಿಗೆ ತುಂಬಾ ಕೃತಜ್ಞರಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.