Home ಟಾಪ್ ಸುದ್ದಿಗಳು ಬ್ರಿಟನ್ ಸಂಸದೀಯ ಚುನಾವಣೆ: ರಿಶಿ ಸುನಕ್ ಪಕ್ಷಕ್ಕೆ ಹೀನಾಯ ಸೋಲು, ಕೀರ್ ಸ್ಟಾರ್ಮರ್ ನೂತನ ಪ್ರಧಾನಿ

ಬ್ರಿಟನ್ ಸಂಸದೀಯ ಚುನಾವಣೆ: ರಿಶಿ ಸುನಕ್ ಪಕ್ಷಕ್ಕೆ ಹೀನಾಯ ಸೋಲು, ಕೀರ್ ಸ್ಟಾರ್ಮರ್ ನೂತನ ಪ್ರಧಾನಿ

ಲಂಡನ್: ಬ್ರಿಟನ್ ಸಂಸದೀಯ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪಕ್ಷ ಭಾರಿ ಸೋಲಿನತ್ತ ಸಾಗುತ್ತಿದೆ.


ಈಗಾಗಲೇ ಬಹುಮತದ ಸಂಖ್ಯೆಗೂ ಮೀರಿ 346 ಸ್ಥಾನಗಳನ್ನು ಗೆದ್ದಿರುವ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಕೀರ್ ಸ್ಟಾರ್ಮರ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.


ತಮ್ಮ ಪಕ್ಷದ ಸೋಲನ್ನು ಒಪ್ಪಿಕೊಂಡಿರುವ ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್, ಸಾರ್ವರ್ತಿಕ ಚುನಾವಣೆಗಳಲ್ಲಿ ಲೇಬರ್ ಪಕ್ಷ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿರುವ ಕೀರ್ ಸ್ಟಾರ್ಮರ್ ನೇತೃತ್ವದ ಪಕ್ಷಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲ ಕಡೆ ಸದುದ್ದೇಶದೊಂದಿಗೆ ಇಂದು ಅಧಿಕಾರವು ಶಾಂತಿಯುತವಾಗಿ ಹಾಗೂ ಕ್ರಮಬದ್ಧವಾಗಿ ಬದಲಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version