Home ಟಾಪ್ ಸುದ್ದಿಗಳು ಪ್ರಯಾಣದ ವೇಳೆ ಸೀಟ್ ಬೆಲ್ಟ್ ತೆಗೆದ ಬ್ರಿಟನ್‌ ಪ್ರಧಾನಿ ರಿಷಿ: ಕ್ಷಮೆ ಯಾಚನೆ

ಪ್ರಯಾಣದ ವೇಳೆ ಸೀಟ್ ಬೆಲ್ಟ್ ತೆಗೆದ ಬ್ರಿಟನ್‌ ಪ್ರಧಾನಿ ರಿಷಿ: ಕ್ಷಮೆ ಯಾಚನೆ

ಲಂಡನ್‌: ಪ್ರಯಾಣದ ವೇಳೆ ವಿಡಿಯೋ ಚಿತ್ರೀಕರಿಸಲೆಂದು ಬ್ರಿಟಿನ್‌ ಪ್ರಧಾನಿ ರಿಷಿ ಸುನಕ್ ಅವರು ಕಾರಿನ ಸೀಟ್ ಬೆಲ್ಟ್ ಅನ್ನು ತೆಗೆದಿದ್ದು, ಬಳಿಕ‌ ಕ್ಷಮೆ ಯಾಚಿಸಿದ್ದಾರೆ.

ಅವರು ತಮ್ಮ ಸೀಟ್ ಬೆಲ್ಟ್ ಅನ್ನು ಕ್ಷಣಕಾಲ ತೆಗೆದಿದ್ದರು. ತಾವು ತಪ್ಪು ಮಾಡಿದ್ದಾಗಿ ಅವರಿಗೆ ಅನಿಸಿದೆ. ಅದನ್ನು ಒಪ್ಪಿಕೊಂಡಿದ್ದಾರೆ’ ಎಂದು ಪ್ರಧಾನಿ ಕಚೇರಿಯ ವಕ್ತಾರರು ಗುರುವಾರ ಸ್ಪಷ್ಟನೆ ನೀಡಿದ್ದಾರೆ.

ಬ್ರಿಟನ್‌ನಲ್ಲಿ ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ, ಕಾರಿನ ಸೀಟ್‌ ಬೆಲ್ಟ್ ಧರಿಸದವರಿಗೆ ಸ್ಥಳದಲ್ಲೇ 100 ಪೌಂಡ್‌ಗಳ (₹10 ಸಾವಿರಕ್ಕೂ ಹೆಚ್ಚು) ದಂಡ ವಿಧಿಸಲಾಗುತ್ತದೆ. ಪ್ರಕರಣ ನ್ಯಾಯಾಲಯಕ್ಕೆ ಹೋದರೆ ದಂಡ 500 ಪೌಂಡ್‌ಗಳಿಗೆ ಹೆಚ್ಚಲಿದೆ.

Join Whatsapp
Exit mobile version