Home ಟಾಪ್ ಸುದ್ದಿಗಳು ಬ್ರಿಟನ್ ಪ್ರಧಾನಿ ಸ್ಪರ್ಧೆಯ ನಾಲ್ಕನೇ ಸುತ್ತಿನಲ್ಲೂ ರಿಷಿ ಸುನಕ್ ಅಗ್ರಸ್ಥಾನ

ಬ್ರಿಟನ್ ಪ್ರಧಾನಿ ಸ್ಪರ್ಧೆಯ ನಾಲ್ಕನೇ ಸುತ್ತಿನಲ್ಲೂ ರಿಷಿ ಸುನಕ್ ಅಗ್ರಸ್ಥಾನ

ಬ್ರಿಟನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕೆ ಮಂಗಳವಾರ ನಡೆದ ನಾಲ್ಕನೇ ಸುತ್ತಿನ ಮತದಾನದಲ್ಲಿ ಮಾಜಿ ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ಗೆಲುವು ಸಾಧಿಸಿದ್ದಾರೆ. ಶಾಸಕ ಕೆಮಿ ಬಡೆನೋಚ್ ಅವರನ್ನು ಸ್ಪರ್ಧೆಯಿಂದ ಹೊರಹಾಕಲಾಯಿತು. ನಾಲ್ಕನೇ ಸುತ್ತಿನ ಅಭ್ಯರ್ಥಿ ರಿಶಿ ಸುನಕ್ 118, ಪೆನ್ನಿ ಮೊರ್ಡಾಂಟ್ 92, ಲಿಜ್ ಟ್ರಸ್ 86 ಮತ್ತು ಕೆಮಿ ಬಡೆನೊಚ್ 59 ಮತಗಳನ್ನು ಪಡೆದಿದ್ದಾರೆ.

ರಿಷಿ ಸುನಕ್ 118 ಮತಗಳನ್ನು ಪಡೆದು ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಬ್ರಿಟನ್ ಪ್ರಧಾನಿ ಸ್ಥಾನದ ಸ್ಪರ್ಧೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ಕೆಮಿ ಬಡೆನೋಚ್ ಚುನಾವಣೆ ಕಣದಿಂದ ಹೊರಬಿದ್ದಿದ್ದಾರೆ.

ಈ ಮೂಲಕ ಕಣದಲ್ಲಿ ಮೂವರು ಮಾತ್ರ ಉಳಿದಿದ್ದಾರೆ. ಬ್ರಿಟನ್ ಪ್ರಧಾನಿ ಹುದ್ದೆಗೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಿಷಿ ಸುನಕ್ 118 ಟೋರಿ ಶಾಸಕರ ಬೆಂಬಲವನ್ನು ಗಳಿಸಿದ್ದಾರೆ. ಅವ ಬಳಿಕ ಪೆನ್ನಿ ಮೊರ್ಡಾಂಟ್ 92, ಲಿಜ್ ಟ್ರಸ್ 86, ರೇಸ್ನಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಉಳಿಯುವವರೆಗೆ ಸಂಸದರು ಮತ ಚಲಾಯಿಸುತ್ತಾರೆ. ವಿಜೇತರನ್ನು ಪಕ್ಷದ ಸದಸ್ಯರು ನಿರ್ಧರಿಸುತ್ತಾರೆ.

Join Whatsapp
Exit mobile version